Webdunia - Bharat's app for daily news and videos

Install App

ಶೀಘ್ರದಲ್ಲಿ ಸೋನಮ್ ಕಪೂರ್ ಮನೆಯಲ್ಲಿ ಗಟ್ಟಿ ಮೇಳ

Webdunia
ಗುರುವಾರ, 19 ಮೇ 2016 (18:11 IST)
ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ಅವರ ಮನೆಯಲ್ಲಿ ಅತೀ ಶೀಘ್ರದಲ್ಲೇ ಮಂಗಳ ಕಾರ್ಯ ನಡೆಯಲಿದೆಯಂತೆ. ಅನಿಲ್ ಕಪೂರ್ ಅವರು ತಮ್ಮ ಮನೆಯಲ್ಲಿ ಶುಭ ಕಾರ್ಯವೊಂದನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆ.ಅರೆ ! ಹಾಗಾದ್ರೆ ಸೋನಮ್ ಮನೆಯಲ್ಲಿ ಮದುವೆಯಾಗ್ತಿರೋದು ಯಾರು ಸೋನಮ್ ಏನಾದ್ರೂ ಮದುವೆ ಆಗ್ತಿದ್ದಾರಾ ಅಂತಾ ಯೋಚಿಸುತ್ತಿದ್ದೀರಾ ಹೇಳ್ತೀವಿ ಕೇಳಿ.
ಅಂದ್ಹಾಗೆ ಸೋನಮ್ ಮನೆಯಲ್ಲಿ ಮದುವೆ ತಯಾರಿ ನಡೆಸುತ್ತಿರೋದು ಸೋನಮ್ ಕಪೂರ್ ಗಳಲ್ಲ. ಬಾಲಿವುಡ್ ನಲ್ಲಿ ಸದ್ಯ ಬ್ರೇಕ್ ಅಫ್ ಗಳ ಸುದ್ದಿನೇ ಹೆಚ್ಚಾಗುತ್ತಿರುವಾಗ ಸೋನಮ್ ಸಹೋದರಿ ರೆಹಾ ಕಪೂರ್ ಅವರು ವಿವಾಹವಾಗೋದಕ್ಕೆಸಿದ್ಧವಾಗಿದ್ದಾರೆ, 
 
ತನ್ನ ಬಹು ಕಾಲದ ಗೆಳೆಯ ಕರಣ್ ಬೋಲಾನಿ ಅವರನ್ನು ರೆಹಾ ವಿವಾಹವಾಗುತ್ತಿದ್ದಾರಂತೆ. ಹಾಗಾಗಿ ಅನಿಲ್ ಕಪೂರ್ ಮನೆಯಲ್ಲಿ ರೆಹಾ ವಿವಾಹಕ್ಕಾಗಿ ಭರ್ಜರಿ ತಯಾರಿಗಳು ನಡೆಯುತ್ತಿವೆ.ಈಗಾಗಲೇ ವಿವಾಹಕ್ಕೆ ಸಂಬಂಧಿಸಿದಂತೆ ಕರಣ್ ಅವರ ಹೆತ್ತವರು ಸೋನಮ್ ತಾಯಿ ಸುನೀತಾ ಕಪೂರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರಂತೆ.
 
ಇನ್ನು ರೆಹಾ ವಿವಾಹ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ.ಆದ್ರೆ ಇದೇ ವರ್ಷ ರೆಹಾ ಹಾಗೂ ಕರಣ್ ಅವರು ವಿವಾಹವಾಗಲಿದ್ದಾರಂತೆ. ಹಾಗಾಗಿ ಬಾಲಿವುಡ್ ಇನ್ನೊಂದು ತಾರಾ ಮನೆಯ ವಿವಾಹಕ್ಕೆ ಸಿದ್ಧವಾದಂತಾಗಿದೆ.ಡಿಸೆಂಬರ್ ನಲ್ಲಿ ಮದುವೆ ನಡೆಸುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ.

  
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಜ್‌ಕುಮಾರ್‌, ಪುನೀತ್ ಹಾದಿಯಲ್ಲೇ ನಡೆದ ಸರೋಜಾ ದೇವಿ, ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ

ಮುಂದಿನ ಸುದ್ದಿ
Show comments