Select Your Language

Notifications

webdunia
webdunia
webdunia
webdunia

ನೀರ್ಜಾ ಸಿನಿಮಾದಲ್ಲಿ ಸೋನಮ್ ಕಪೂರ್ ಅದ್ಭುತವಾಗಿ ಅಭಿನಯಿಸಿದ್ದಾರೆ- ಆಮೀರ್ ಖಾನ್

ನೀರ್ಜಾ ಸಿನಿಮಾದಲ್ಲಿ ಸೋನಮ್ ಕಪೂರ್ ಅದ್ಭುತವಾಗಿ ಅಭಿನಯಿಸಿದ್ದಾರೆ- ಆಮೀರ್ ಖಾನ್
ಮುಂಬೈ , ಮಂಗಳವಾರ, 16 ಫೆಬ್ರವರಿ 2016 (20:28 IST)
ಸೋನಮ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಗಣ್ಯರಿಗಾಗಿ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಅನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ತಾರೆಯರಾದ ಹೃತಿಕ್ ರೋಷನ್ , ಆಮೀರ್ ಖಾನ್, ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್ ಮುಂತಾದವರು ಭಾಗವಹಿಸಿದ್ದರು.
 
ಇನ್ನು ನೀರ್ಜಾ ಸಿನಿಮಾವನ್ನು ವೀಕ್ಷಿಸಿದ ನಟ ಆಮೀರ್ ಖಾನ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆಮೀರ್ ಖಾನ್ ನೀರ್ಜಾ ಸಿನಿಮಾ ಅತ್ಯಂತ ಸುಂದರವಾದ ಸಿನಿಮಾ.ಸ್ಫೂರ್ತಿದಾಯಕವಾದ ಸಿನಿಮಾ. ಚಿತ್ರದಲ್ಲಿ ನಟಿ ಸೋನಮ್ ಕಪೂರ್ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. 
 
ಅವರ ಅಭಿನಯ ನೋಡಿ ನನಗೆ ತುಂಬಾನೇ ಖುಷಿಯಾಯ್ತು.ಇನ್ನು ಸಿನಿಮದ ಹಿರಿಯ ನಟಿ ಶಬಾನಾ ಆಜ್ಮಿ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ.ಇದು ಅವರ ಜೀವನಮಾನದ ಅತ್ಯಂತ ಉತ್ತಮವಾದ ಅಭಿನಯ ಅಂತಾ ಮಿಸ್ಟರ್ ಪರ್ಫೆಕ್ಷನಿಸ್ಟ್ ಹೇಳಿದ್ದಾರೆ.
 
ನೀರ್ಜಾ ಭಾನೋಟ್ ಅವರ ಜೀವನ ಕಥೆಯಾಧಾರಿತ ಸಿನಿಮಾ ಇದಾಗಿದ್ದು,ಸಿನಿಮಾದಲ್ಲಿ ಸೋನಮ್ ಕಪೂರ್ ಅವರು ನೀರ್ಜಾ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಹಿರಿಯ ನಟಿ ಶಬಾನಾ ಆಜ್ಮಿ ಅವರು ನೀರ್ಜಾ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾ ಇದೇ ವಾರ ಪ್ರೇಕ್ಷಕರೆದುರಿಗೆ ಬರಲಿದೆ.
 

Share this Story:

Follow Webdunia kannada