Webdunia - Bharat's app for daily news and videos

Install App

ಸೋನಾಕ್ಷಿ ಬರ್ತಡೇ ಜೂನ್ 2 ಅಭಿಮಾನಿಗಳು ಸಂಪ್ರೈಸ್

Webdunia
ಸೋಮವಾರ, 23 ಮೇ 2016 (19:08 IST)
ಬಾಲಿವುಡ್ ನ ದಬಾಂಗ್ ಚೆಲುವೆ ಸೋನಾಕ್ಷಿ ಸಿನ್ಹಾ ಅವರನ್ನು ಸದ್ಯ ತೆರೆ ಮೇಲೆ ಅಭಿಮಾನಿಗಳು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದೇಕೋ ಗೊತ್ತಿಲ್ಲ ಸೋನಾಕ್ಷಿ ಸಿನ್ನಾ ಅವರ ಸಿನಿಮಾಗಳು ಸದ್ಯ ಯಾವುದೂ ಕೂಡ ರಿಲೀಸ್ ಆಗಿಲ್ಲ.

ಅವರ ಅಭಿಮಾನಿಗಳಂತೂ ಅವರ ಸಿನಿಮಾವನ್ನು ಯಾವಾಗ ನೋಡುತ್ತೇವೋ ಅಂತಾ ಕಾಯುತ್ತಲೇ ಇದ್ದಾರೆ. ಹೀಗಿರುವಾಗ ಸೋನಾಕ್ಷಿ ನಾನು ನಿಮಗೆಲ್ಲಾ ಸಂಪ್ರೈಸ್ ನೀಡುತ್ತೇನೆ ಅಂದಿದ್ದಾರೆ.
 
ಜೂನ್ 2 ನೇ ತಾರೀಕಿನಂದು ಸೋನಾಕ್ಷಿ ಸಿನ್ಹಾ ತಮ್ಮ ಬರ್ತಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ, ಅದೇ ತಮ್ಮ ಅಭಿಮಾನಿಗಳಿಗೆ ಸೋನಾಕ್ಷಿ ಸಿನ್ಹಾ ಅವರು ಸಂಪ್ರೈಸ್ ಒಂದನ್ನು ನೀಡುತ್ತಾರಂತೆ. ಜೂನ್ 2 ಕ್ಕೆ ಸೋನಾಕ್ಷಿ ಸಿನ್ಹಾ ತಮ್ಮ 29ನೇ ವರ್ಷದ ಬರ್ತಡೇಯಯನ್ನು ಆಚರಿಸಿಕೊಳ್ಳುತ್ತಾರೆ. 
 
ಮೊನ್ನೆ ಸೋನಾಕ್ಷಿ ಸಿನ್ಹಾ ಅವರಲ್ಲಿ ಅವರ ಕೆಲವು ಅಭಿಮಾನಿಗಳು ನಿಮ್ಮ ಮುಂದಿನ ಸಿನಿಮಾ ಯಾವುದು ಅಂತಾ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಾಕ್ಷಿ ಸಿನ್ಹಾ ನನ್ನ ಮುಂದಿನ ಸಿನಿಮಾ ಯಾವುದು ಅನ್ನೋದನ್ನು ಬರ್ತಡೇ ದಿನ ನಿಮಗೆಲ್ಲಾ ಹೇಳುತ್ತೇನೆ. ಆ ದಿನ ನಿಮಗೆಲ್ಲಾ ಅಚ್ಚರಿಯೊಂದು ಕಾದಿದೆ ಅಂತಾ ಅವರು ಹೇಳಿದ್ದಾರೆ.
 
ಸದ್ಯ ಸೋನಾಕ್ಷಿ ಸಿನ್ಹಾ ಅಕಿರಾ ಹಾಗೂ ಫೋರ್ಸ್-2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಅವರ ಸಹೋದರಿಯ ಜೀವನಕಥಾಧಾರಿತ ಸಿನಿಮಾ ಹಸೀನಾದಲ್ಲಿ ಸೋನಾಕ್ಷಿ ಸಿನ್ಹಾ ಅವರು ಹಸೀನಾ ಪಾತ್ರವನ್ನು ನಿರ್ವಹಿಸುತ್ತಾರೆ ಅಂತಾ ಸುದ್ದಿಯಾಗಿತು.ಆದ್ರೀಗ ಸೋನಾಕ್ಷಿ ಈ ಸಿನ್ಹಾ ಅವರು ಈ ಸಿನಿಮಾದಲ್ಲಿ ಅಭಿನಯಿಸೋದಿಲ್ಲ ಅಂತಾ ಹೇಳಲಾಗುತ್ತಿದೆ. ಸೋನಾಕ್ಷಿ ಸಿನ್ಹಾ ಅವರ ಜಾಗಕ್ಕೆ ಶ್ರದ್ಧಾ ಕಪೂರ್ ಅವರು ಆಯ್ಕೆಯಾಗಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments