Webdunia - Bharat's app for daily news and videos

Install App

ಡ್ರಾಮಾ ಕ್ವಿನ್ ರಾಖಿ ಸಾವಂತ್‍ಗೆ ಮದುವೆಯಂತೆ!

Webdunia
ಗುರುವಾರ, 12 ಜನವರಿ 2017 (10:36 IST)
ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ವರ್ಷ ಅವರು ಮದುವೆ ಮಾಡಿಕೊಳ್ಳಬೇಕೆಂದು ಆಕೆಯ ಬೆಸ್ಟ್ ಫ್ರೆಂಡ್, ಹಾಲಿವುಡ್ ನಟಿ, ರೂಪದರ್ಶಿ ಸೋಫಿಯಾ ಹಯಾತ್ ಹೇಳಿದ್ದಾರೆ. ರಾಖಿ ಸಾವಂತ್ ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರು ಕಲ್ಲಿನ ಮೇಲೆ ಪ್ರವಹಿಸುವ ನದಿ ತರಹ. ಅವರು ನಿಲ್ಲುವುದಿಲ್ಲ, ನಿರಂತರ ಪ್ರವಹಿಸುತ್ತಿರುತ್ತಾಳೆ ಎಂದಿದ್ದಾರೆ ಸೋಫಿಯಾ.
 
ಇನ್ನೂ ಮುಂದುವರೆದು ಹುಡುಗಿಯರೆಲ್ಲಾ ರಾಖಿ ಸಾವಂತ್‌ರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಆಕೆ ನನ್ನ ಸ್ನೇಹಿತೆ ಆಗಿರುವುದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದಿದ್ದಾರೆ. ಆದರೆ ಅವರ ಬಗ್ಗೆ ನಾನು ಆತಂಕ ಪಡುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ರಾಖಿ ಮದುವೆಯಾದರೆ ಒಳ್ಳೆಯದು. ಈ ವರ್ಷದಲ್ಲಿ ಅವರು ಮದುವೆಯಾದರೆ ಉತ್ತಮ. ಆಕೆಗೆ ಒಳ್ಳೆಯ ಸಂಬಂಧವನ್ನೂ ನೋಡುತ್ತಿದ್ದೇನೆ ಎಂದಿದ್ದಾರೆ. 
 
ಈ ಹಿಂದೆ ರಾಖಿ ಸಾವಂತ್ ಮಾಲಾ ಮಾಲ್ ವೀಕ್ಲಿ, ಕ್ರೇಜಿ 4, 1920 ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ರಾಖಿ ಕಾ ಸ್ವಯಂವರ ಎಂಬ ರಿಯಾಲಿಟಿ ಶೋ ನಿರ್ವಹಿಸಿ ಸುದ್ದಿಯಾಗಿದ್ದರು.  ಆ ಶೋನಲ್ಲಿ ಗೆದ್ದ ಈಲೇಶ್ ಪರುಜನ್‌ವಾಲಾ ಎಂಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವರಿಬ್ಬರೂ ಒಂದಾಗಲಿಲ್ಲ. 
 
ರಾಖಿ ಸಾವಂತ್ ಅವರನ್ನು ಬಹಳಷ್ಟು ಮಂದಿ ಅರ್ಥ ಮಾಡಿಕೊಂಡಿಲ್ಲ. ಅವರು ಮೇಲ್ಮೋಟಕ್ಕೆ ಸೆಕ್ಸ್ ಸಿಂಬಲ್ ತರಹ ಕಾಣಿಸಿದರೂ ಒಳಗಡೆ ಋಷಿಯಂತಹವರು. ಆಕೆಯ ಕೈಹಿಹಿಡಿಯುವವರು ನಿಜಕ್ಕೂ ಅದೃಷ್ಟವಂತರು ಎಂದೂ ರಾಖಿ ಬಗ್ಗೆ ಸೋಫಿಯಾ ಹೇಳಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments