Webdunia - Bharat's app for daily news and videos

Install App

ಮತ್ತೆ ಕಿರುತೆರೆಗೆ ಬಂದ ಶಿಲ್ಪಾ ಶೆಟ್ಟಿ

Webdunia
ಶುಕ್ರವಾರ, 27 ಮೇ 2016 (10:55 IST)
ನಟಿ ಶಿಲ್ಪಾ ಶೆಟ್ಟಿ ವಿವಾಹವಾಗಿದ್ದೇ ತಡ  ಬಾಲಿವುಡ್ ಗೆ ಟಾಟಾ ಹೇಳ್ಬಿಟ್ರು. ಯೋಗ, ಪತಿ ರಾಜ್ ಕುಂದ್ರಾ ವ್ಯವಹಾರ ಅಂತಾ ಬ್ಯುಸಿಯಾಗಿ ಬಿಟ್ರು. ಈ ನಡುವೆ ಕಿರುತೆರೆಯಲ್ಲಿ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ್ರು ಆ ಬಳಿಕ ಕಿರುತೆರೆಯಲ್ಲೂ ಅವರು ಕಾಣಿಸಿಕೊಳ್ಳಲೇ ಇಲ್ಲ.ಆದ್ರೀಗ ಶಿಲ್ಪಾಶೆಟ್ಟಿ ಮತ್ತೆ ಕಿರುತೆರೆಗೆ ವಾಪಸ್ಸಾಗಿದ್ದಾರೆ.

 
 ಈ ಹಿಂದೆ ನಟಿ ಶಿಲ್ಪಾ ಶೆಟ್ಟಿ ನಾಚ್ ಬಲಿಯೇ,ಝಲಕ್ ದಿಖ್ ಲಾಜಾ  ಎರಡು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.ಆ ಬಳಿಕ ಶಿಲ್ಪಾ ಕಿರುತೆರೆಯಿಂದಲೇ ನಾಪತ್ತೆಯಾಗಿದ್ದರು.ಆದ್ರೀಗ ಇಂಡಿಯಾ ಸೂಪರ್ ಡ್ಯಾನ್ಸರ್ ಅನ್ನೋ ಡ್ಯಾನ್ಸ್ ಕಾರ್ಯಕ್ರಮಕ್ಕೆ ಶಿಲ್ಪಾ ಶೆಟ್ಟಿ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
 
ಅಂದ್ಹಾಗೆ ಈ ಕಾರ್ಯಕ್ರಮದಲ್ಲಿ 8 ರಿಂದ 13 ವರ್ಷದ ಒಳಗಿನ ಮಕ್ಕಳ ನೃತ್ಯ ಪ್ರದರ್ಶನಕ್ಕೆ ಶಿಲ್ಪಾ ಶೆಟ್ಟಿ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಶಿಲ್ಪಾ ಅವರಂತೂ ಈ ಕಾರ್ಯಕ್ರಮದಲ್ಲಿ ಜಡ್ಜ್ ಆಗ್ತಿರೋದಕ್ಕೆ ತುಂಬಾನೇ ಖುಷಿಯಾಗಿದ್ದಾರಂತೆ.
 
 ಮಕ್ಕಳ ವಿವಿಧ ರೀತಿಯ ಪರ್ಫಾಮೆನ್ಸ್ ನ್ನು ಕಣ್ತುಂಬಿಕೊಳ್ಳೋದೇ ಒಂದು ಖುಷಿ. ಹೀಗಿರುವಾಗ ನಾನು ಇಂತಹ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಆಯ್ಕೆಯಾಗಿರೋದು ನನಗೆ ತುಂಬಾನೇ ಖುಷಿ ತಂದಿದೆ ಅಂತಾ ಅವರು ಹೇಳಿದ್ದಾರೆ.ಇನ್ನು ಕಾರ್ಯಕ್ರಮದಲ್ಲಿ ಬೇರೆ ರು ಜಡ್ಜ್ ಗಳಾಗಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಇದುವರೆಗೂ ಖಚಿತವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಜ್ ನಿಡಿಮೋರು ಜತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ವಿದೇಶದಲ್ಲಿ ಒಟ್ಟಾಗಿ ಆತ್ಮೀಯವಾಗಿ ಕಾಣಿಸಿಕೊಂಡ ಸಮಂತಾ

ಮಾಶಾ ಘರ್ ಖ್ಯಾತಿಯ ಪಾಕ್‌ ನಟಿ ಹುಮೈರಾ ಅಸ್ಗರ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಶಿವಣ್ಣನ ಲುಕ್‌ಗೆ ಎಲ್ಲರೂ ಫಿದಾ

ಎಲ್ಲಾ ಒಪ್ಪಿಯೇ ನಡೆದಿದ್ದು, ರೇಪ್ ಕೇಸ್ ಹಿಂತೆಗೆದುಕೊಳ್ಳಿ: ಮಡೆನೂರು ಮನು ಮನವಿ

77ಲಕ್ಷ ವಂಚನೆ ಪ್ರಕರಣ: ಆಲಿಯಾ ಭಟ್‌ ಮಾಜಿ ಆಪ್ತ ಸಹಾಯಕಿ ಬೆಂಗಳೂರಿನಲ್ಲಿ ಅರೆಸ್ಟ್‌

ಮುಂದಿನ ಸುದ್ದಿ
Show comments