Select Your Language

Notifications

webdunia
webdunia
webdunia
webdunia

ನಗ್ನ ವಿಡಿಯೋ ವಿವಾದ: ಹಾಟ್ ನಟಿ ರಾಧಿಕಾ ಆಪ್ಟೆ ಪರ ಬ್ಯಾಟ್ ಬೀಸಿದ ಶ್ವೇತಾ ಬಸು

ನಗ್ನ ವಿಡಿಯೋ ವಿವಾದ: ಹಾಟ್ ನಟಿ ರಾಧಿಕಾ ಆಪ್ಟೆ ಪರ ಬ್ಯಾಟ್ ಬೀಸಿದ ಶ್ವೇತಾ ಬಸು
ನವದೆಹಲಿ , ಮಂಗಳವಾರ, 5 ಮೇ 2015 (15:12 IST)
ತನ್ನ ನಗ್ನ ವಿಡಿಯೋ ಲೀಕ್ ಆದ ನಂತರ ಮಾಧ್ಯಮಗಳಲ್ಲಿ ಸುದ್ದಿಗೆ ಆಹಾರವಾಗುತ್ತಿರುವ ರಾಧಿಕಾ ಆಪ್ಟೆಯವರ ಬೆಂಬಲಕ್ಕೆ ಕೆಲ ತಿಂಗಳುಗಳ ಹಿಂದೆ ವೇಶ್ಯಾವಾಟಿಕೆ ವಿವಾದದಲ್ಲಿ ಸಿಲುಕಿಕೊಂಡಿದ್ದ ಶ್ವೇತಾ ಬಸು ನಿಂತಿದ್ದಾರೆ. 

ವರದಿಗಳ ಪ್ರಕಾರ ಶ್ವೇತಾ, ರಾಧಿಕಾ ಮತ್ತು  ಅವರ ಚಿತ್ರ ನಿರ್ಮಿಸಿದ ಅನುರಾಗ್ ಕಶ್ಯಪ್ ಅವರ ಸಮರ್ಥನೆಗೆ ನಿಂತಿದ್ದಾರೆ. 
 
ಆ ದೃಶ್ಯ ಚಿತ್ರೀಕರಣಗೊಳ್ಳುತ್ತಿದ್ದಾಗ ಸೆಟ್‌ನಲ್ಲಿದ್ದ ಇಬ್ಬರು ಮಹಿಳೆಯರಲ್ಲಿ ಶ್ವೇತಾ ಕೂಡ ಒಬ್ಬರಾಗಿದ್ದರು. ದೃಶ್ಯ ಕಲಾತ್ಮಕವಾಗಿ ಮೂಡಿ ಬಂದಿದ್ದಕ್ಕೆ ಶ್ವೇತಾ ನಿರ್ದೇಶಕ ಮತ್ತು ನಟಿಯನ್ನು ಹೊಗಳಿದ್ದಾರೆ. ಆ ಸಿನಿಮಾ ಮತ್ತು ನಿರ್ದೇಶಕರ ಬಗ್ಗೆ ತಮಗೆ ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. 
 
ಆದರೆ ಈ ಸಿನಿಮಾದ ಬಗ್ಗೆ ಜನರು ನೀಡಿದ ಪ್ರತಿಕ್ರಿಯೆಯನ್ನು ಮುಂದಿಟ್ಟುಕೊಂಡು ನೋಡುವುದಾದರೆ ಇದನ್ನು ಭಾರತದಲ್ಲಿ ವಿತರಣೆ ಮಾಡದಿರುವ ನಿರ್ಧಾರ ಸರಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.  

Share this Story:

Follow Webdunia kannada