Select Your Language

Notifications

webdunia
webdunia
webdunia
webdunia

ಶೃತಿ ಹಾಸನ್ ಹೊಸ ಗೆಟಪ್

ಶೃತಿ ಹಾಸನ್ ಹೊಸ ಗೆಟಪ್
, ಶನಿವಾರ, 21 ನವೆಂಬರ್ 2015 (11:39 IST)
ಮಲಯಾಳಂನ ಸೂಪರ್ ಹಿಟ್ ಸಿನಿಮಾ  ಪ್ರೇಮಂ  ಚಿತ್ರ ಈಗ ತೆಲುಗಿಗೆ ರಿಮೇಕ್‌ ಆಗುತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿ ನಟಿ ಶ್ರುತಿ ಹಾಸನ್‌ ಆಯ್ಕೆಯಾಗಿದ್ದು ಅವರು ಇಲ್ಲಿ ಉಪನ್ಯಾಸಕಿಯಾಗಿ ಕಾಣಿಸಿಕೊಳ್ತಿದ್ದಾರೆ.

 
ಮಲಯಾಳಂನ  ಪ್ರೇಮಂ  ಸಿನಿಮಾದಲ್ಲಿ ಸಾಯಿ ಪಲ್ಲವಿ ಮಾಡಿದ್ದ ಪಾತ್ರವನ್ನು ಇಲ್ಲಿ ಶ್ರುತಿ ಹಾಸನ್‌ ವಹಿಸಿಕೊಳ್ಳಲಿದ್ದಾರಂತೆ ಸೂಪರ್‌ಹಿಟ್‌ ಸಿನಿಮಾದ ಉಪನ್ಯಾಸಕಿ ಪಾತ್ರವನ್ನು ನಿರ್ವಹಿಸಲು ಶ್ರುತಿ ತುದಿಗಾಲಲ್ಲಿ ನಿಂತಿದ್ದಾರಂತೆ. 
 
ಇನ್ನು ಈ ಸಿನಿಮಾವನ್ನು ತೆಲುಗಿನಲ್ಲಿ ಚಂದೂ ಅವರು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಮಜ್ನು ಎಂದು ನಾಮಕರಣ ಮಾಡಲಾಗಿದೆಯಂತೆ. ಈ ಸಿನಿಮಾದ ನಾಯಕನಟರಾಗಿ ನಾಗ ಚೈತನ್ಯ ಕಾಣಿಸಿಕೊಳ್ಳಲಿದ್ದಾರೆ ಅಂತ ಕಾಲಿವುಡ್‌ನಲ್ಲಿ ಸುದ್ದಿ ಹರಿದಾಡ್ತಿದೆ.
 
ಪ್ರೇಮಂ ಸಿನಿಮಾದಲ್ಲಿ ನಟಿಸಿದ್ದ ಅನುಪಮಾ ಪರಮೇಶ್ವರನ್‌ ಕೂಡ ಇಲ್ಲಿ ಮೂಲ ಪಾತ್ರಕ್ಕೆ  ಬಣ್ಣಹಚ್ಚಲಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಈ ಸಿನಿಮಾಕ್ಕೆ ನಿರ್ಮಾಪಕ ಎಸ್‌.ರಾಧಾ ಕೃಷ್ಣ ಬಂಡವಾಳ ಹೂಡಿದ್ದಾರೆ.

Share this Story:

Follow Webdunia kannada