ತೆಲಗು ಚಿತ್ರರಂಗದ ದಿಗ್ಗಜ ಅಕ್ಕಿನೇನಿ ನಾಗೇಶ್ವರ್ ಕುಟುಂಬದ ಕುಡಿ ನಟ ಅಖಿಲ್ ಅಕ್ಕಿನೇನಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶ್ರೇಯಾ ಭೂಪಾಲ್ ಜತೆಗೆ ನಟ ಅಖಿಲ್ ನಿಶ್ಚಿತಾರ್ಥವಾಗಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ನಟ ನಾಗಾರ್ಜುನ್ ಘೋಷಣೆ ಮಾಡಿದ್ದಾರೆ.
ಇನ್ನೂ ನಟಿ ಸಮಂತಾ ಹಾಗೂ ನಾಗ್ ಚೈತನ್ಯ ಮದುವೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ನಟ ನಾಗಾರ್ಜುನ್ ಶೀಘ್ರದಲ್ಲೇ ಉತ್ತಮ ಸಮಯ ನೋಡಿ ತಿಳಿಸಲಿದ್ದೇನೆ ಎಂದಿದ್ದಾರೆ. ಸದ್ಯಕ್ಕೆ ಅಖಿಲ್ ಹಾಗೂ ಶ್ರೇಯಾ ಎಂಗೇಜ್ಮೆಂಟ್ ಬಳಿಕ ಅಖಿಲ್ ಹಾಗೂ ಶ್ರೇಯಾ ಮುಂದಿನ ವರ್ಷ ಮದುವೆಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ