Webdunia - Bharat's app for daily news and videos

Install App

ಬಾಲಿವುಡ್ ಅಂಗಳದಲ್ಲಿ ಪೂಜಾ ಭಟ್ ಟೀಮ್ ನಲ್ಲಿ ಶ್ರೀಶಾಂತ್ ಆಟ

Webdunia
ಶುಕ್ರವಾರ, 28 ನವೆಂಬರ್ 2014 (11:53 IST)
ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ ಎಂದು ಡಾ. ರಾಜ್ ಕುಮಾರ್ ಅವರ ಅಭಿನಯದ ಹಳೆಯ ಚಿತ್ರಗೀತೆಯ ಸಾಲು ನೆನಪಾಗುತ್ತದೆ ಮಾಜಿ ವೇಗದ ಬೌಲರ್  ಶ್ರೀಶಾಂತ್  ಅವರ ಬದುಕಿನ  ಬೆಳವಣಿಗೆ  ಕಂಡಾಗ. ಮ್ಯಾಚ್ ಫಿಕ್ಸಿಂಗ್  ನಲ್ಲಿ ಸಿಕ್ಕಿ  ಹಾಕಿಕೊಂಡು ಆ ಬಳಿಕ ತಾನು ತಪ್ಪಿತಸ್ಥ ಅಲ್ಲ ಎಂದು ಮಾಧ್ಯಮಗಳ ಮುಂದೆ ಗೋಳಾಡಿ, ಅದಾದ ಬಳಿಕ ರಾಜಸ್ಥಾನಿ ಹೆಣ್ಣು ಮಗಳಾದ ಭುವನೇಶ್ವರಿ ಕುಮಾರಿ ಜೊತೆ ಮದುವೆ ಆದ ಶ್ರೀಶಾಂತ್ ಅವರ ಬದುಕಿನ ಜೊತೆ ಕನ್ನಡ ಲಕ್ಷ್ಮಿ ರೈ, ಶ್ವೇತ ಶ್ರೀವಾತ್ಸವ್, ಸಂಜನಾ ಗಲ್ರಾಣಿ ಅವರುಗಳ ಹೆಸರು ಸೇರಿಕೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಈ ಹಣವಂತನ ಬದುಕಲ್ಲಿ ಕ್ರಿಕೆಟ್ ಇಲ್ಲದೆ ಇದ್ದರೇನು ದುಡ್ಡಿದೆ ಎನ್ನುವಂತೆ ಈಗ ಚಿತ್ರರಂಗದಲ್ಲಿ ತಮ್ಮನ್ನು ಬೆಳೆಸಿಕೊಳ್ಳಲು ಹೊರಟಿದ್ದಾರೆ. 

 
ಈ ಮೊದಲು ಹಿಂದಿ ಡ್ಯಾನ್ಸ್ ರಿಯಾಲಿಟಿ ಷೋ ನಲ್ಲಿ ಭಾಗಿಯಾಗಿದ್ದ ಶ್ರೀಶಾಂತ್, ಅದಾದ ಬಳಿಕ ಟಾಲಿವುಡ್ ಚಿತ್ರದಲ್ಲಿ  ಖಳ ನಟರಾಗಿ ಅಭಿನಯಿಸುವ ಅವಕಾಶ ಪಡೆದರು. ಅಲ್ಲದೆ ಮಲೆಯಾಳಂ ಚಿತ್ರದಲ್ಲಿ ಪ್ರಧಾನ ಪಾತ್ರಧಾರಿ ಆಗಿ ಸೆಲೆಕ್ಟ್ ಆದ ಶ್ರೀ ಈಗ ಬಾಲಿವುಡ್ ಚಿತ್ರ ಒಂದಕ್ಕೆ ಹೀರೋ ಆಗಿದ್ದಾರೆ. 
 
ಪೂಜಾ ಭಟ್ ಅವರ ನಿರ್ಮಾಣದ  ಚಿತ್ರ ಕ್ಯಾಬರೆಟ್ ನಲ್ಲಿ ಶ್ರೀಶಾಂತ್ ಗೆ ಅವಕಾಶ ಸಿಕ್ಕಿದೆ. ರಿಚಾ ಚೆಡ್ಡ ಇದರ ಹೀರೋಯಿನ್. ತಮ್ಮ ಪಾತ್ರಕ್ಕೆ ಅಗತ್ಯವಾದ ಚುರುಕುತನ ಶ್ರೀಶಾಂತ್  ನಲ್ಲಿ ಇರುವ ಕಾರಣ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರಂತೆ ಪೂಜಾ ಮೇಡಂ. ಅವಕಾಶಕ್ಕಾಗಿ ಕಾಯುತ್ತಿರುವ ಅಸಂಖ್ಯಾತ ಪ್ರತಿಭಾವಂತರಿಗೆ ದೊರಕದ ಒಂದು ಪುಟ್ಟ ಅವಕಾಶ ಇನ್ನು ಒಂದು ಚಿತ್ರದಲ್ಲೂ ನಟಿಸದ ಶ್ರೀಶಾಂತ್ ಗೆ ದೊರಕುತ್ತಿದೆ ಎಂದರೆ ..! ಅದಕ್ಕೆ ನಾವು ಆರಂಭದಲ್ಲಿ ಹೇಳಿದ್ದು ಹಣವಿದ್ದರೆ ನೀ ದಿನಕರನಂತೆ ಇಲ್ಲ ದಿದ್ದರೆ... ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?