Webdunia - Bharat's app for daily news and videos

Install App

ತಮಿಳು ಚಿತ್ರಕ್ಕೆ ಡಬ್ ಮಾಡಲಿರುವ ನಟಿ ಶ್ರದ್ಧಾ ಶ್ರೀನಾಥ್

Webdunia
ಮಂಗಳವಾರ, 6 ಸೆಪ್ಟಂಬರ್ 2016 (17:19 IST)
'ಯೂಟರ್ನ್' ಚಿತ್ರದ ನಟಿ ಶ್ರದ್ಧಾ ಶ್ರೀನಾಥ್ ತಾವೇ ಅಭಿನಯಿಸಲಿರುವ ತಮಿಳು ಚಿತ್ರಕ್ಕೆ ಇನ್ಮುಂದೆ ಡಬ್ ಮಾಡಲಿದ್ದಾರೆ. ನಟಿ ಶ್ರದ್ಧಾ ಶ್ರೀನಾಥ್ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. 


 
ನನಗೆ ಭಾಷೆ ಬಗ್ಗೆ ಗೊತ್ತಿಲ್ಲ. ನಾನು ಭಾಷೆ ಕಲಿಯುತ್ತಿದ್ದೇನೆ. ನಿರ್ದೇಶಕ ಗೌತಮ್ ನನ್ನ ಪಾತ್ರಕ್ಕೆ ಡಬ್ ಮಾಡುವಂತೆ ತಿಳಿಸಿದ್ದರು. ಗೌತಮ್ ನನಗೆ ತರಬೇತಿ ನೀಡುವುದಾಗಿ ಹೇಳಿದ್ದರು ಎಂದು ಶ್ರದ್ಧಾ ತಿಳಿಸಿದ್ದಾರೆ. ಶ್ರದ್ಧಾ ಮತ್ತೆರೆಡು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಣಿರತ್ನಂ ಚಿತ್ರ ಹಾಗೂ ಗೌತಮ್ ಕಾರ್ತಿಕ್ ಜತೆಗೆ ಚಿತ್ರದಲ್ಲಿ  ನಟಿಸುತ್ತಿರುವ ಶ್ರದ್ಧಾಗೆ ಕೈಯಲ್ಲಿ ಸಾಕಷ್ಟು ಆಫರ್ ಗಳಿವೆ. 

ಮೊನ್ನೆ ತಾನೇ ಶ್ರದ್ಧಾ ಶ್ರೀನಾಥ್ ಅವರು ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಆ  ಮೂಲಕ ಶ್ರದ್ಧಾ ತಮಿಳಿನಲ್ಲೂ ತಮ್ಮ ಸ್ಥಾನ ಭದ್ರಪಡಿಸುವಂತಹ ಸೂಚನೆ ನೀಡಿದ್ದರು.
 
ಯೂ ಟರ್ನ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ ನಟಿ ಅಂದ್ರೆ ಅದು ಶ್ರದ್ಧಾ ಶ್ರೀನಾಥ್. ತನ್ನ ಮೊದಲ ಸಿನಿಮಾದಲ್ಲೇ ನಾನೊಬ್ಬ ಉತ್ತಮ ನಟಿ ಅನ್ನೋದನ್ನು ತೋರಿಸಿದ ಶ್ರದ್ಧಾಗೆ ಬಳಿಕ ಕನ್ನಡದಲ್ಲಿ ಒಂದರ ಹಿಂದೆ ಒಂದು ಅವಕಾಶಗಳು ಬರೋದಕ್ಕೆ ಆರಂಭವಾಗಿದೆ.

ಸುನಿ ನಿರ್ದೇಶನದ ಅಪರೇಷನ್ ಅಲಮೇಲಮ್ಮ ಸಿನಿಮಾದಲ್ಲಿಯೂ ಶ್ರದ್ಧಾ ಅವರು ಅಭಿನಯಿಸುತ್ತಿದ್ದಾರೆ. ಇನ್ನು ಊರ್ವಿ ಸಿನಿಮಾದಲ್ಲೂ ಶ್ರದ್ಧಾ ಕಮಾಲ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಹೀಗಿರುವಾಗಲೇ ಶ್ರದ್ಧಾ ಅವರಿಗೆ ಮತ್ತೊಂದು ಅವಕಾಶ ಒದಗಿ ಬಂದಿದೆ. ಶಶಾಂಕ್ ನಿರ್ದೇಶನದ ಮುಂಗಾರು ಮಳೆ-2 ಸಿನಿಮಾದಲ್ಲಿಯೂ ಶ್ರದ್ಧಾ ಅವರು ಅಭಿನಯಿಸುತ್ತಿದ್ದಾರಂತೆ.
 
ಅಂದ್ಹಾಗೆ ಸಿನಿಮಾದಲ್ಲಿ ಶ್ರದ್ಧಾ ಅವರದ್ದು ಅತಿಥಿ ಪಾತ್ರವಂತೆ.ಆದ್ರೆ ಯಾವ ರೀತಿಯ ಪಾತ್ರ ಅನ್ನೋದು ಸಿನಿರಸಿಕರಿಗೆ ಚಿತ್ರಮಂದಿರದಲ್ಲೇ ಗೊತ್ತಾಗಲಿದೆ ಅಂತಾ ಅವರು ಹೇಳಿದ್ದರು..ಅಲ್ಲದೇ ನಾನು ಯೂಟರ್ನ್ ಸಿನಿಮಾದಲ್ಲಿನ ಶ್ರದ್ಧಾ ಅವರ ಪಾತ್ರವನ್ನು ನೋಡಿಯೇ ಅವರಿಗೆ ನನ್ನ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಅವಕಾಶ ನೀಡಿದೆ.ಆಕೆ ಉತ್ತಮ ಕಲಾವಿದೆ ಅನ್ನೋದರಲ್ಲಿ ಎರಡು ಮಾತಿಲ್ಲ ಅಂತಾ ಅವರು ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments