Select Your Language

Notifications

webdunia
webdunia
webdunia
webdunia

ಧಡ್ಕನ್ ದಿನಗಳನ್ನು ಮತ್ತೆ ನೆನಪಿಸಿಕೊಂಡ ಶಿಲ್ಪಾ ಹಾಗೂ ಸುನೀಲ್ ಶೆಟ್ಟಿ

ಧಡ್ಕನ್ ದಿನಗಳನ್ನು ಮತ್ತೆ ನೆನಪಿಸಿಕೊಂಡ ಶಿಲ್ಪಾ ಹಾಗೂ ಸುನೀಲ್ ಶೆಟ್ಟಿ
ಮುಂಬೈ , ಸೋಮವಾರ, 29 ಫೆಬ್ರವರಿ 2016 (11:21 IST)
ನಟಿ ಶಿಲ್ಪಾ ಶೆಟ್ಟಿ ಸುನೀಲ್ ಶೆಟ್ಟಿ ಹಾಗೇ ಅಕ್ಷಯ್ ಕುಮಾರ್ ಅಭಿನಯಿಸಿದ್ದ ಧಡ್ಕನ್ ಸಿನಿಮಾವನ್ನು ಬಾಲಿವುಡ್ ನ ಯಾವೊಬ್ಬ ಚಿತ್ರರಸಿಕನೂ ಕೂಡ ಮರೆಯೋದಕ್ಕೆ ಸಾಧ್ಯನೇ ಇಲ್ಲ. ಮೊನ್ನೆಯಷ್ಟೇ ಶಿಲ್ಪಾ ಹಾಗೂ ಸುನೀಲ್ ಶೆಟ್ಟಿ ಕೂಡ  ಆ ದಿನಗಳನ್ನು ಮತ್ತೆ ನೆನಪಿಸಿಕೊಂಡ್ರು.
 
ಇತ್ತೀಚೆಗೆ ಸ್ಕೇರ್ ಚಾರಿಟಿ ಕ್ರಿಕೆಟ್ ಮ್ಯಾಚ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಸುನೀಲ್ ಹಾಗೂ ಶಿಲ್ಪಾ ಶೆಟ್ಟಿ ಜೊತೆಯಾಗಿ ಸೆಲ್ಫಿಗೆ ಫೋಸ್ ಕೊಟ್ರು.ಅಲ್ಲದೇ ಟ್ವಿಟರ್ ನಲ್ಲಿ ಈ ಫೋಟೋವನ್ನು ಶೇರ್ ಮಾಡಿರುವ ಶಿಲ್ಪಾ ಶೆಟ್ಟೀಸ್ ಆರ್ ಬ್ಯಾಕ್, ಅಂತಾ ಹೇಳಿದ್ದಾರೆ. ಅಲ್ಲದೇ ನಾವಿಬ್ಬರು ಧಡ್ಕನ್ ಸಿನಿಮಾದ ದಿನಗಳನ್ನು ನೆನಪಿಸಿಕೊಂಡೆವು ಅಂತಾ ಅವರು ಹೇಳಿದ್ದಾರೆ.

2000ರಲ್ಲಿ ತೆರೆ ಕಂಡ ಧಡ್ಕನ್ ಸಿನಿಮಾ ಆ ವರ್ಷ ಬಾಕ್ಸಾಫೀಸ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಧಡ್ಕನ್ ಸಿನಿಮಾ ತ್ರಿಕೋನ ಪ್ರೇಮಕಥೆ ಹೊಂದಿದ್ದ ಸಿನಿಮಾ. ಅಕ್ಷಯ್ ಕುಮಾರ್ ಶಿಲ್ಪಾ ಶೆಟ್ಟಿ ಹಾಗೇ ಸುನೀಲ್ ಅಭಿನಯದ ಈ ಸಿನಿಮಾದಲ್ಲಿ ಸುನೀಲ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಅಭಿನಯಕ್ಕಾಗಿ ಫಿಲ್ಮ್ ಫೇರ್ ಬೆಸ್ಟ್ ವಿಲನ್ ಪ್ರಶಸ್ತಿಯನ್ನು ಸುನೀಲ್ ತಮ್ಮ ಮುಡಿಗೇರಿಸಿಕೊಂಡಿದ್ದರು.

Share this Story:

Follow Webdunia kannada