Webdunia - Bharat's app for daily news and videos

Install App

ಶೆಫಾಲಿ ಜರಿವಾಲಾ ಕೊನೆಯ ದಿನ ಈ ರೀತಿ ಮಾಡಿದ್ದೇ ಸಾವಿಗೆ ಕಾರಣವಾಯ್ತಾ

Krishnaveni K
ಮಂಗಳವಾರ, 1 ಜುಲೈ 2025 (11:28 IST)
ಮುಂಬೈ: ಹುಡುಗರು ಸಿನಿಮಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ಕೊನೆಯ ದಿನ ಮಾಡಿದ  ಈ ಒಂದು ತಪ್ಪೇ ಅವರ ಜೀವಕ್ಕೆ ಕುತ್ತಾಯ್ತು ಎನ್ನಲಾಗುತ್ತಿದೆ. ಅಷ್ಟಕ್ಕೂ ಆಕೆಯ ಕೊನೆಯ ದಿನ ಹೇಗಿತ್ತು ಇಲ್ಲಿದೆ ನೋಡಿ  ವಿವರ.

ಜೂನ್ 27 ರಂದು ತಡರಾತ್ರಿ 42 ವರ್ಷದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅರೋಗ್ಯವಾಗಿದ್ದ ನಟಿಗೆ ಇದ್ದಕ್ಕಿದ್ದಂತೆ ಏನಾಯ್ತು ಎಂದು ಎಲ್ಲರಿಗೂ ಆಘಾತವಾಗಿತ್ತು. ಇದೀಗ ಆಕೆಯ ಆರೋಗ್ಯದ ಬಗ್ಗೆ ನಾನಾ ಸುದ್ದಿಗಳು ಕೇಳಿಬರುತ್ತಿವೆ.

ಶೆಫಾಲಿ ಲೋ ಬಿಪಿಯಿಂದಾಗಿ ಕುಸಿದುಬಿದ್ದಿರಬಹುದು ಎಂದು ಪೋಸ್ಟ್ ಮಾರ್ಟಂ ಮಾಡಿದ ವೈದ್ಯರು ಶಂಕಿಸಿದ್ದರು. ಅಷ್ಟಕ್ಕೂ ಆಕೆಗೆ ಲೋ ಬಿಪಿ ಆಗಲು ಕಾರಣ ಏನಿರಬಹುದು ಎಂದು ಹುಡುಕುತ್ತಾ ಹೋದರೆ ಕೊನೆಯ ದಿನ ಆಕೆ ಉಪವಾಸವೇ ಕಾರಣ ಎನ್ನಬಹುದು.

ಮೂಲಗಳ ಪ್ರಕಾರ ಯಾವುದೇ ಪೂಜೆ ನಿಮಿತ್ತ ಶೆಫಾಲಿ ಅಂದು ಉಪವಾಸವಿದ್ದರಂತೆ. ಉಪವಾಸವಿದ್ದಾಗ ಮಾತ್ರೆ ತೆಗೆದುಕೊಂಡಿದ್ದರಿಂದ ಈ ರೀತಿ ಆಗಿರಬಹುದು ಎಂದು ಈಗ ಹೇಳಲಾಗುತ್ತಿದೆ. ಆ ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆಯಿತ್ತು. ಪೂಜೆ ನಿಮಿತ್ತ ಶೆಫಾಲಿ ಉಪವಾಸವಿದ್ದರು. ವ್ರತ ಎಲ್ಲಾ ಮುಗಿದ ಬಳಿಕ ಆಕೆ ಆಹಾರ ಸೇವನೆ ಮಾಡಿದ್ದಾರೆ. ಆಹಾರ ಸೇವನೆ ಮಾಡಿದ ತಕ್ಷಣ ಆಕೆ ಕುಸಿದುಬಿದ್ದಿದ್ದಾರೆ ಎಂದು ಆಕೆಯ ಪತಿ ಪರಾಗ್ ತ್ಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೆಫಾಲಿ ಕುಸಿದು ಬೀಳುವಾಗ ಪರಾಗ್ ಕೆಳಗೆ ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದರಂತೆ. ಮನೆಕೆಲಸದಾಕೆ ಫೋನ್ ಮಾಡಿ ತಿಳಿಸಿದ ಬಳಿಕ ಪರಾಗ್ ಓಡೋಡಿ ಬಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಸಮಾಧಿ ಏಕಾಏಕಿ ತೆರವಿಗೆ ರಿಷಭ್‌ ಶೆಟ್ಟಿ ಖಂಡನೆ: ಕಲಾಸೇವೆಗೆ ಅಗೌರವ ಎಂದು ಡಿವೈನ್ ಸ್ಟಾರ್‌ ಬೇಸರ

ರಾಖಿ ಕಟ್ಟದೆಯೇ ದರ್ಶನ್‌ಗೆ ರಕ್ಷಾ ಬಂಧನದ ಶುಭಕೋರಿದ ನಟಿ ಸೋನಲ್ ಮೊಂಥೆರೋ

ಕಿಚ್ಚ ಸುದೀಪ್ ಭಾವುಕ ಪೋಸ್ಟ್ : ಸಂಕಟ ಆಗ್ತಿದೆ ಎಂದಿದ್ದೇಕೆ ಕಿಚ್ಚ

ಶಂಕಿತ ಡೆಂಗ್ಯೂ ಜ್ವರಕ್ಕೆ ಕರಾವಳಿಯ ಪ್ರತಿಭಾನ್ವಿತ ಕಲಾವಿದ ಬಲಿ

ಸುಬ್ರಹ್ಮಣ್ಯ ಭೇಟಿ ಬೆನ್ನಲ್ಲೇ ಗುಡ್‌ನ್ಯೂಸ್‌ ಕೊಟ್ರಾ ವಿಕ್ಕಿ, ಕತ್ರಿನಾ ಕೈಫ್ ಜೋಡಿ

ಮುಂದಿನ ಸುದ್ದಿ
Show comments