Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಕ್ರಮಕ್ಕೆ ಶಾರುಖ್ ಖಾನ್ ಬೆಂಬಲ

ನರೇಂದ್ರ ಮೋದಿ ಕ್ರಮಕ್ಕೆ ಶಾರುಖ್ ಖಾನ್ ಬೆಂಬಲ
ಮುಂಬೈ , ಗುರುವಾರ, 10 ನವೆಂಬರ್ 2016 (12:55 IST)
ಮುಂಬೈ: ಕಪ್ಪು ಹಣ ಬೆತ್ತಲು ಮಾಡಲು 1000, 500 ನೋಟು ನಿಷೇಧಿಸಿದ ಪ್ರಧಾನಿ ನರೇಂದ್ರ ಮೋದಿ ಕ್ರಮಕ್ಕೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬರ್ಥದಲ್ಲಿ ಹೇಳಿಕೆ ನೀಡಿ ಮೋದಿ ವಿರೋಧಿ ಎಂದು ಪರೋಕ್ಷವಾಗಿ ಗುರುತಿಸಿಕೊಂಡಿದ್ದ ಶಾರುಖ್ ಇದೀಗ ಈ ವಿಚಾರದಲ್ಲಿ ಮೋದಿ ಪರವಾಗಿ ಮಾತನಾಡಿದ್ದಾರೆ.

“ಇದೊಂದು ಅದ್ಭುತ ಕೆಲಸ. ಧೈರ್ಯದ ನಿರ್ಧಾರ. ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ರಾಜಕೀಯದ ದುರುದ್ದೇಶವಿಲ್ಲದ ಒಂದು ಕ್ರಮ” ಎಂದು ಮೋದಿ ಗುಣಗಾನ ಮಾಡಿದ್ದಾರೆ. ಇದಕ್ಕೂ ಮೊದಲು ಸೂಪರ್ ಸ್ಟಾರ್ ರಜನೀಕಾಂತ್, ಅಮಿತಾಭ್ ಬಚ್ಚನ್, ಕರಣ್ ಜೋಹರ್ ಮುಂತಾದವರು ಪ್ರಧಾನಿ ಮೋದಿ ಕ್ರಮವನ್ನು ಸ್ವಾಗತಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಮಿಡಿ ಶೋನಲ್ಲಿ ಜಾನ್ ಅಬ್ರಹಾಂಗೆ ಕೋಪ ಬಂದಿದ್ದು ಯಾಕೆ?