Webdunia - Bharat's app for daily news and videos

Install App

ಮಗು ಫೋಟೋ ತೆಗೆದಿದ್ದಕ್ಕೆ ಶಾಹಿದ್ ಕಪೂರ್ ಗರಂ

Webdunia
ಶುಕ್ರವಾರ, 6 ಜನವರಿ 2017 (07:07 IST)
ಬಾಲಿವುಡ್ ಚಾಕೊಲೇಟ್ ಬಾಯ್ ಶಾಹಿದ್ ಕಪೂರ್ ಮತ್ತು ಮೀರಾ ರಾಜಪುತ್ ದಂಪತಿಗಳಿಗೆ ಇತ್ತೀಚೆಗೆ ಮುದ್ದಾದ ಮಗು ಆಗಿತ್ತು ಗೊತ್ತೇ ಇದೆ. ಆದರೆ ಇದುವರೆಗೂ ತನ್ನ ಮಗುವಿನ ಫೋಟೋವನ್ನು ಮಾಧ್ಯಮಗಳಿಗೆ ತೋರಿಸಿರಲಿಲ್ಲ. ಮಗುವಿನ ಮಿಷಾ ಕಪೂರ್ ಅಂತ ಹೆಸರಿಟ್ಟಿದ್ದಾರೆ.
 
ಇತ್ತೀಚೆಗೆ ಕುಟುಂಬದೊಂದಿಗೆ ಎಲ್ಲಿಗೆ ಹೋದರೂ ಮಗುವಿನ ಮುಖ ತೋರಿಸದಂತೆ ಎಚ್ಚರಿಕೆ ವಹಿಸಿದ್ದರು. ಆದರೆ ಸ್ವಲ್ಪ ದಿನಗಳ ಹಿಂದೆ ಪತ್ನಿ ಮಗು ಜೊತೆಗೆ ಹೊರಗೆ ಹೋಗಬೇಕಾದರೆ ಮಾಧ್ಯಮದ ಕ್ಯಾಮೆರಾಗಳಿಗೆ ಸಿಕ್ಕಿಬಿದ್ದರು. ಒಮ್ಮೆಲೆ 20 ಕ್ಯಾಮೆರಾಗಳು ಮಗುವಿನ ಫೋಟೋ ಕ್ಲಿಕ್ಕಿಸಲು ಮುಂದಾದವು.
 
ಇದರಿಂದ ಬೇಸಗೊಂಡ ಶಾಹಿದ್ ಕಪೂರ್, ಸ್ವಲ್ಪ ದೂರ ಸರೀರಿ ಎಂದು ಮಗುವಿನ ಫೋಟೋ ತೆಗೆಯದಂತೆ ವಿನಂತಿಕೊಂಡಿದ್ದರು. ಆದರೆ ಯಾರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. "ಅಷ್ಟೊಂದು ಕ್ಯಾಮೆರಾಗಳಿಂದ ಹತ್ತಿರದಿಂದ ಫೋಟೋ ತೆಗೆದರೆ ಹಸುಗೂಸಿನ ಕಣ್ಣುಗಳಿಗೆ ತೊಂದರೆಯಾಗುತ್ತದೆಂಬ ವಿವೇಕ ಫೋಟೋಗ್ರಾಫರ್‌ಗಳಿಗೆ ಇಲ್ಲದಿರುವುದು ದುಃಖಕರ. ಅವರಿಗೆ ಸ್ವಲ್ಪವೂ ಸಾಮಾನ್ಯ ಜ್ಞಾನ ಇಲ್ಲ" ಎಂದು ಟ್ವೇಟ್ ಮಾಡಿ ಬೇಗುದಿ ಹೊರಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇಡಿ ಮುಂದೇ ಹಾಜರಾದ ವಿಜಯ್ ದೇವರಕೊಂಡ ಹೀಗಂದ್ರು

ದರ್ಶನ್‌ಗಾಗಿ ದೇವರಲ್ಲಿ ನನ್ನದೊಂದು ಪ್ರಾರ್ಥನೆ ಇದ್ದೇ ಇರುತ್ತದೆ: ವಿಜಯ್ ರಾಘವೇಂದ್ರ

ಉಪೇಂದ್ರಗೆ ಜೋಡಿಯಾದ ಮಾಲಾಶ್ರೀ ಮಗಳು ಆರಾಧನಾ, ವಯಸ್ಸಿನ ಅಂತರ ಬಗ್ಗೆ ಚಿತ್ರತಂಡ ಹೀಗೇ ಹೇಳಿದ್ದು

ಮುಂದಿನ ಸುದ್ದಿ
Show comments