Select Your Language

Notifications

webdunia
webdunia
webdunia
webdunia

ಪರಸ್ಪರ ನಿರ್ಲಕ್ಷಿಸಿದ ಶಾಹಿದ್ ಕಪೂರ್ -ಪ್ರಿಯಾಂಕಾ ಛೋಪ್ರಾ?

ಪರಸ್ಪರ ನಿರ್ಲಕ್ಷಿಸಿದ ಶಾಹಿದ್ ಕಪೂರ್ -ಪ್ರಿಯಾಂಕಾ ಛೋಪ್ರಾ?
ಮುಂಬೈ , ಶುಕ್ರವಾರ, 24 ಜೂನ್ 2016 (12:51 IST)
ಅವಾರ್ಡ್ ಫಂಕ್ಷನ್ ವೇಳೆ ಭಾಗಿಯಾಗಿದ್ದ ಮಾಜಿ ಪ್ರೇಮಿಗಳಾದ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ಶಾಹಿದ್ ಪರಸ್ಪರ ನಿರ್ಲಕ್ಷಿಸುವುದು ಕಂಡು ಬಂದಿದೆ. ಇದೇ ವೇಳೆ ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ಬಾಲಿವುಡ್ ಮಂದಿ ಭಾಗಿಯಾಗಿದ್ದರು.  

ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ್ದ ಶಾಹಿದ್ ಹಾಗೂ ಪ್ರಿಯಾಂಕಾ ಛೋಪ್ರಾ ಪರಸ್ಪರ ಒಬ್ಬರನೊಬ್ಬರು ನಿರ್ಲಕ್ಷಿಸಿರುವುದರ ಬಗ್ಗೆ ಕ್ಯಾಮರಾ ಸೆರೆಹಿಡಿದಿದೆ.

ಮಾಜಿ ಪ್ರೇಮಿಗಳಿಬ್ಬರು ಒಬ್ಬರನೊಬ್ಬರು ನೋಡದೇ ದೂರದಿಂದ ಹೋಗುತ್ತಿರುವುದು ಕಂಡು ಬಂದಿದೆ. ಇನ್ನೂ ಫಂಕ್ಷನ್‌ಗೆ ಭಾಗಿಯಾಗಿದ್ದ ಪ್ರಿಯಾಂಕಾ ಶಾಹಿದ್ ಹಾಯ್ ಎಂದು ಕೂಡ ಹೇಳಲಿಲ್ಲ. ಇನ್ನೂ ಇಬ್ಬರ ಮುಖದಲ್ಲಿ ಒಂದು ಸ್ಮೈಲ್ ಕೂಡ ಇರಲಿಲ್ಲವಂತೆ.

 
ಉಡ್ತಾ ಪಂಜಾಬ್' ಚಿತ್ರದಲ್ಲಿ ಶಾಹಿದ್ ಕಪೂರ್ -ಆಲಿಯಾ ನಟಿಸಿದ್ದಾರೆ. ಕಳೆದ ಶುಕ್ರವಾರದಂದು ಚಿತ್ರ ತೆರೆ ಕಂಡಿತ್ತು.
ಓಪನಿಂಗ್ ದಿನದಲ್ಲಿ ಸರಾಸರಿಯಷ್ಟು ಅಂದ್ರೆ 8 ರಿಂದ 9 ಕೋಟಿ ಗಳಿಕೆ ಕಂಡಿದ್ದ ಉಡ್ತಾ ಪಂಜಾಬ್ ಚಿತ್ರ. ಪ್ರಮುಖ ಪಾತ್ರದಲ್ಲಿ ಆಲಿಯಾ ಭಟ್, ಶಾಹಿದ್ ಕಪೂರ್, ಕರೀನಾ ಕಪೂರ್ ಹಾಗೂ ದಿಲ್ಜಿತ್ ಅಭಿನಯಿಸಿದ್ದಾರೆ.
 
ಉಡ್ತಾ ಪಂಜಾಬ್ ಚಿತ್ರ 2.000 ಸ್ಕ್ರೀನ್ ಮೇಲೆ ಚಿತ್ರ ತೆರೆ ಕಂಡಿದೆ.ಜನ ಸಾಮಾನ್ಯರಿಗೆ ಅನುಕೂಲವಾಗಲೆಂದು ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಮೇಲೂ ಚಿತ್ರ ತೆರೆ ಕಂಡಿದ್ದು, ಯಾರು ಬೇಕಾದರೆ ಹೋಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚು ಭಾರತೀಯರು ಹಾಲಿವುಡ್ ಚಿತ್ರಗಳಲ್ಲಿ ನಟಿಸಲಿ: ದೀಪಿಕಾ ಪಡುಕೋಣೆ