Select Your Language

Notifications

webdunia
webdunia
webdunia
webdunia

ಅರ್ಪಿತಾ ವಿವಾಹದ ರಿಸೆಪ್ಸನ್‌ನಲ್ಲಿ ಮನದಣಿ ನರ್ತಿಸಿದ ಶಾರುಖ್, ಸಲ್ಮಾನ್

ಅರ್ಪಿತಾ ವಿವಾಹದ ರಿಸೆಪ್ಸನ್‌ನಲ್ಲಿ ಮನದಣಿ ನರ್ತಿಸಿದ ಶಾರುಖ್, ಸಲ್ಮಾನ್
ನವದೆಹಲಿ , ಶನಿವಾರ, 22 ನವೆಂಬರ್ 2014 (16:45 IST)
ಶಾರುಖ್,  ಹೈದರಾಬಾದಿನಲ್ಲಿ ನಡೆದ ಸಲ್ಮಾನ್ ಸಹೋದರಿ ಅರ್ಪಿತಾರ ಮದುವೆಯಲ್ಲಿ ಭಾಗವಹಿಸದಿರಬಹುದು, ಆದರೆ  ಮುಂಬೈಯಲ್ಲಿ ಶುಕ್ರವಾರ ರಾತ್ರಿನಡೆದ ವಿವಾಹ ರಿಸೆಪ್ಸನ್‌ನಲ್ಲಿ  ಹಾಜರಾಗಿದ್ದ ಶಾರುಖ್ ಮನದಣಿ ನರ್ತಿಸಿದರು. 

ದಿಲ್-ಸೆ ಸಿನಿಮಾದ ಚೈಯ್ಯಾ ಚೈಯ್ಯಾ ಎಂಬ ಹಾಡಿಗೆ ಸಲ್ಮಾನ್ ಮತ್ತು ಶಾರುಖ್ ಜತೆಗೂಡಿ ನರ್ತಿಸಿದ್ದು ಅವರ ಮರುಮೈತ್ರಿಗೆ ಸಾಕ್ಷಿಯಾಗಿತ್ತು. ಒಬ್ಬರಿಗೊಬ್ಬರು ಅಣಕವಾಡುತ್ತ, ಜೋಕ್ ಶೇರ್ ಮಾಡುತ್ತಾ ಅವರು ಸಂಭ್ರಮಿಸಿದರು. ಹೃತಿಕ್ ರೋಶನ್ ಸಹ ಅವರಿಬ್ಬರ ಜತೆಗೂಡಿ ವಾತಾವರಣವನ್ನು ಮತ್ತೂ ಸಡಗರಯುತಗೊಳಿಸಿದರು .
 
ರವಿವಾರ ಯುವ ವಧುವರರ ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡ ಶಾರುಖ್, ಹೈದರಾಬಾದ್‌ನ ರಾಯಲ್ ಫಲ‌ಕ್‌ನುಮಾ ಅರಮನೆಯಲ್ಲಿ ನಡೆದ ಮದುವೆಯ ಸಂದರ್ಭದಲ್ಲಿ ಸ್ಥಳದಲ್ಲಿರಲಿಲ್ಲ. ಆ ಕಾರಣ  ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಮುಂಬೈನಲ್ಲಿ ನಡೆದ ರಿಸೆಪ್ಸನ್‌ ಸಂದರ್ಭದಲ್ಲಿ  ಶಾರುಖ್ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡು ಎಲ್ಲ ಗುಮಾನಿಗಳಿಗೆ ತೆರೆ ಎಳೆದರು. ಪಾರ್ಟಿ ಮುಗಿದ ತರುವಾಯ ಸಲ್ಮಾನ್ ಮತ್ತು ಅವರ ತಾಯಿ ಸಲ್ಮಾ ಜತೆ ಶಾರುಖ್ ಹೊರಬರುತ್ತಿರುವುದು ಕಂಡು ಬಂತು. 
 
ನವೆಂಬರ್ 18 ರಂದು ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಹೈದರಾಬಾದ್‌ನಲ್ಲಿ ಸಪ್ತಪದಿ ತುಳಿದಿದ್ದರು. ಅತಿರಂಜಿತ ಕಾರ್ಯಕ್ರಮಕ್ಕಾಗಿ ಖಾನ್‌ದ್ವಯರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ. 

Share this Story:

Follow Webdunia kannada