Webdunia - Bharat's app for daily news and videos

Install App

ಮಾಲಿನ್ಯ ತಡೆಗಟ್ಟಲು ಸೈಕಲ್ ಸವಾರಿ ಮಾಡುವಂತೆ ಕರೆ ನೀಡಿದ ಸಲ್ಲು-ಶಾರೂಖ್

Webdunia
ಶುಕ್ರವಾರ, 1 ಜುಲೈ 2016 (14:30 IST)
ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರು ಜತೆಗೂಡಿ ಸೈಕಲ್ ಸವಾರಿ ಮಾಡಿದ್ದಾರೆ. ಈ ವೇಳೆ ಇಬ್ಬರು ಸ್ನೇಹಿತರಂತೆ ಜತೆಗೂಡಿ ಸೈಕಲ್ ಮೇಲೆ ಕುಳಿತುಕೊಂಡು ಪೋಸ್ ನೀಡಿರುವುದರ ಬಗ್ಗೆ ಎಸ್‌ಆರ್‌ಕೆ ತಮ್ಮ ಅಭಿಮಾನಿಗಳಿಗೆ ಫೊಟೋ ಶೇರ್ ಮಾಡಿದ್ದಾರೆ. ಮಾಲಿನ್ಯವನ್ನು ತಡೆಯಲು ಸೈಕಲ್ ಸವಾರಿ ಮಾಡುವಂತೆ ಸಂದೇಶ ನೀಡಲು ಸಲ್ಲು ಹಾಗೂ ಕಿಂಗ್ ಖಾನ್ ಸೈಕಲ್ ಸವಾರಿ ಮಾಡಿರುವುದು ತಿಳಿದು ಬಂದಿದೆ. 
ಈ ಮೂಲಕ ನಾವಿಬ್ಬರು ಸ್ನೇಹಿತರು ಎಂಬ ಸಂದೇಶವನ್ನು ಸಲ್ಮಾನ್ ಸಾರಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಶಾರೂಖ್ ಫೊಟೋಗಳನ್ನು ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌ಗಳಿಗೆ ಶೇರ್ ಮಾಡಿದ್ದಾರೆ. 'ಭಾಯಿ ಭಾಯಿ ನೋ ಬೈಕ್ ರೈಡ್' ,ಮೈಕಲ್ ಲಾಲ್ ಸೈಕಲ್ ಲಾಲ್ ಎಂದು ಎಸ್‌ಆರ್‌ಕೆ ಕ್ಯಾಪ್ಶನ್ ನೀಡಿದ್ದಾರೆ. 
 
ಈ ಫೊಟೋದಲ್ಲಿ ಶಾರೂಖ್ ಖಾನ್ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ, ಇನ್ನೂ ಸಲ್ಮಾನ್ ಕೂಡ ಕ್ಯಾಸ್ಯುವೆಲ್ ಬ್ಲ್ಯಾಕ್ ಬಣ್ಣದ ಡ್ರೆಸ್ ಧರಿಸಿರುವುದನ್ನು ಇಲ್ಲಿ ಕಾಣಬಹುದು.ಮಾಲಿನ್ಯವನ್ನು ತಡೆಗಟ್ಟಲು ಶಾರೂಖ್ ಹಾಗೂ ಸಲ್ಮಾನ್ ಸಂದೇಶ ನೀಡಿದ್ದಾರೆ.

ಜುಲೈ 6 ರಂದು ಸುಲ್ತಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಮೊನ್ನೆಯಷ್ಟೇ ಸೆನ್ಸಾರ್ ಬೋರ್ಡ್ ಸುಲ್ತಾನ್ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿತ್ತು.ಅಲ್ಲದೇ ಸಿನಿಮಾದ ಒಂದೇ ಒಂದು ಕಡೆ ಕೂಡ ಕತ್ತರಿ ಹಾಕಿರಲಿಲ್ಲ ಸೆನ್ಸಾರ್ ಬೋರ್ಡ್ . ಹಾಗಾಗಿ ಸಿನಿಮಾ ತಂಡ ಕೂಡ ಫುಲ್ ಖುಷಿಯಾಗಿತ್ತು. ಅಂದ್ಹಾಗೆ ಸುಲ್ತಾನ್ ಸಿನಿಮಾ ಈದ್ ಹಬ್ಬಕ್ಕೆ ರಿಲೀಸ್ ಆಗುತ್ತಿರೋದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
 
ಸುಲ್ತಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಅವರು ಸಲ್ಲುಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಬ್ಯಾನರ್ ನಡಿ ಆದಿತ್ಯಾ ಛೋಪ್ರಾ ಅವರು ಸುಲ್ತಾನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments