Webdunia - Bharat's app for daily news and videos

Install App

ಶಾರೂಖ್ ಖಾನ್,ಆಲಿಯಾ ಅಭಿನಯದ 'ಡಿಯರ್ ಜಿಂದಗಿ' ರಿಲೀಸ್‌ಗೆ ಡೇಟ್ ಫಿಕ್ಸ್

Webdunia
ಬುಧವಾರ, 20 ಜುಲೈ 2016 (12:46 IST)
ಕಿಂಗ್ ಖಾನ್ ಶಾರೂಖ್ ಖಾನ್ ಹಾಗೂ ಆಲಿಯಾ ಅಭಿನಯದ 'ಡಿಯರ್ ಜಿಂದಗಿ 'ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಶಾರೂಖ್ ಖಾನ್ ಜತೆಗೆ ಆಲಿಯಾಳ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇಬ್ಬರ ಕೆಮೆಸ್ಟ್ರಿ ಚಿತ್ರದಲ್ಲಿ ಯಾವ ರೀತಿ ಇರಬಹುದು ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಬಗ್ಗೆ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಟ್ವಿಟರ್‌ನಲ್ಲಿ ಘೋಷಣೆ ಮಾಡಿದೆ. 

 ಮುಖ್ಯಪಾತ್ರದಲ್ಲಿ ಶಾರೂಖ್ ಖಾನ್ ಹಾಗೂ ಆಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್ 25ಕ್ಕೆ 'ಡಿಯರ್ ಜಿಂದಗಿ '' ಚಿತ್ರ ರಿಲೀಸ್ ಕಾಣಲಿದೆ. ಇನ್ನೂ ಕರಣ್ ಜೋಹರ್ ಚಿತ್ರದ ನಿರ್ಮಾಣಕ್ಕಾಗಿ ಕೈ ಜೋಡಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. 

ವಿಶೇಷವೆಂದರೆ ಆಲಿಯಾ ಮೊದಲ ಬಾರಿಗೆ ಶಾರೂಖ್ ಜತೆಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು. ಈ ಚಿತ್ರದಲ್ಲಿ ಶಾರೂಖ್ ಜತೆಗಿನ ಆಲಿಯಾಳ ಕೆಮೆಸ್ಟ್ರಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 

2016ರಲ್ಲಿ ಶಾರೂಖ್ ಖಾನ್ ಅಭಿನಯದ 'ರಾಯಿಸ್' ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.. ಈ ಸಿನಿಮಾದ ಬಗ್ಗೆ ಹಲವರು ಮಾತಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಷ್ಟೇ ರಾಯಿಸ್ - ಕಾಬಿಲ್ ಒಂದೇ ದಿನ ಕ್ಲ್ಯಾಶ್ ಆಗದಂತೆ ಶಾರೂಖ್ ಖಾನ್ ಹೃತಿಕ್ ರೋಷನ್ ನಿವಾಸಕ್ಕೆ ಮಧ್ಯರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 

ಶಾರೂಖ್ ರಾಯಿಸ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಬಿಲ್ ಚಿತ್ರದ ದಿನಾಂಕವನ್ನು ಮುಂದುಡುವಂತೆ ರಾಕೇಶ್ ರೋಷನ್‌ಗೆ ಶಾರೂಖ್ ಕೋರಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಮುಂದಿನ ಸುದ್ದಿ
Show comments