Webdunia - Bharat's app for daily news and videos

Install App

ಹಿರಿಯ ಹಾಸ್ಯ ನಟ ಸಂಕೇತ್ ಕಾಶಿ ವಿಧಿವಶ

Webdunia
ಭಾನುವಾರ, 7 ಆಗಸ್ಟ್ 2016 (09:31 IST)
ಹಿರಿಯ ಹಾಸ್ಯ ನಟ ಸಂಕೇತ ಕಾಶಿ (62) ಹೃದಯಾಘಾತದಿಂದ ಶನಿವಾರ ವಿಧಿವಶರಾಗಿದ್ದಾರೆ.. ಕಳೆದ ಮೂರು ದಿನಗಳ ಹಿಂದೆ ಹೃದಯದಲ್ಲಿ ನೋವು ಕಾಣಿಸಿಕೊಂಡಿತ್ತು. ಅವರನ್ನು ಮೂಡಲಹಾಳ್ಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. 

 
ಮೃತರು ಸಹೋದರ ರೇಣುಕಾ ವಿಜಯ್ ಸೇರಿದಂತೆ ಹಲವು ಬಂಧು ಬಳಗ, ಚಿತ್ರರಂಗದ ಹಲವು ಗೆಳೆಯರು, ರಂಗಭೂಮಿಯ ಒಡನಾಡಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇವತ್ತು ಬನಶಂಕರಿಯಲ್ಲಿ ನೆರವೇರಲಿದೆ.
 
1989 ಮೂಡಿ ಬಂದ 'ಮಧುಮಾಸ್' ಚಿತ್ರದಲ್ಲಿ ಕಾಶಿಯ ಸಿನಿಮಾ ಪಯಣ ಶುರುವಾಗಿತ್ತು. ಅಲ್ಲಿಂದ ಮುಂದುವರೆದ ಅವರ ಸಿನಿಮಾ ಯಾತ್ರೆ, ಇನ್ನೂ ಬಿಡುಗಡೆಯಾಗದ ರಾಜಕುಮಾರ್, ಜಾನ್ ಜಾನಿ ಜನಾರ್ದನ್ ಚಿತ್ರದಲ್ಲಿ ನಟಿಸಿದ್ದರು. ನಟ ರಮೇಶ್ ಅವರವಿಂದ್ ಜತೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 
 
ನಟ ಶಂಕರನಾಗ್ ಅವರ ಆಪ್ತ ಸ್ನೇಹಿತರಾಗಿದ್ದ ಕಾಶಿ ಇದುವರೆಗೂ ಅವಿವಾಹಿತರಾಗಿಯೇ ಉಳಿದಿದ್ದರು. ಶಂಕರ್ ನಾಗ್ ಅವರು ಕಟ್ಟಿದ್ದ ಸಂಕೇತ ಎಂಬ ರಂಗತಂಡದ ಪ್ರಮುಖ ಸದಸ್ಯರಾಗಿದ್ದರು. ಶಂಕರ್ ನಾಗ್ ಅವರೊಂದಿಗೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಹಾಗೇ ಶಂಕರ್ ನಾಗ್ ಜತೆಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
 
ಇವರ ಯಶಸ್ವಿ ಚಿತ್ರಗಳಾದ 'ಉಲ್ಟಾ ಪಲ್ಟಾ', 'ನಮ್ಮೂರ ಮಂದಾರ ಹೂವೇ', 'ಮಾಂಗಲ್ಯಂ ತಂತುನಾನೇನಾ', 'ಸಿಪಾಯಿ', 'ನಾನು ನನ್ನ ಹೆಂಡ್ತೀರು',' ಪಂಚಮ ವೇದ' ಸೇರಿದಂತೆ 115ಕ್ಕೂ ಅಧಿಕ ಚಿತ್ರಗಳಲ್ಲಿ ಸಂಕೇತ್ ಕಾಶಿ ಕಾಣಿಸಿಕೊಂಡಿದ್ದರು. 'ನನ್ ಹೆಂಡ್ತಿ ಚೆನ್ನಾಗಿದ್ದಾಳೆ' ಚಿತ್ರದಲ್ಲಿ ಕಾಶಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

Sitare Zameen Par: ಸಿನಿಮಾ ಬಾಯ್ಕಾಟ್ ಭಯಕ್ಕೆ ಎಕ್ಸ್ ಪೇಜ್ ಗೆ ತ್ರಿವರ್ಣ ಧ್ವಜ ಹಾಕಿದ ಅಮೀರ್ ಖಾನ್ ಸಂಸ್ಥೆ

Archana Udupa: ಅರ್ಚನಾ ಉಡುಪಗೆ ಕ್ಯಾನ್ಸರ್ ನಿಜಾನಾ: ಗಾಯಕಿ ಹೇಳಿದ್ದೇನು

ಮುಂದಿನ ಸುದ್ದಿ
Show comments