Select Your Language

Notifications

webdunia
webdunia
webdunia
webdunia

ಸಂಜಯ್ ದತ್‌ಗೆ ಸನ್ನಡತೆಯ ಆಧಾರದ ಮೇಲೆ ಫೆ. 27ರಂದು ಬಿಡುಗಡೆ

ಸಂಜಯ್ ದತ್‌ಗೆ  ಸನ್ನಡತೆಯ ಆಧಾರದ ಮೇಲೆ ಫೆ. 27ರಂದು ಬಿಡುಗಡೆ
ಮುಂಬೈ: , ಬುಧವಾರ, 6 ಜನವರಿ 2016 (12:32 IST)
ಮುಂಬೈ ನಗರದಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದ ಸಂಜಯ್ ದತ್ ಜೈಲಿನಿಂದ ಫೆ. 27ರಂದು ಬಿಡುಗಡೆಯಾಗಲಿದ್ದಾರೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಮುಂಬೈ ಕೋರ್ಟ್ ತೀರ್ಪಿತ್ತ ಬಳಿಕ ಪುಣೆಯ ಯರವಾಡ ಜೈಲಿನಲ್ಲಿ 18 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಸಂಜಯ್ ದತ್ ಈಗ ಸನ್ನಡತೆಯ ಆಧಾರದಲ್ಲಿ 8 ತಿಂಗಳು ಮುಂಚಿತವಾಗಿ ಬಿಡುಗಡೆಯಾಗಲಿದ್ದಾರೆ.  
 
ನಟ ಸಂಜಯ್ ದತ್ 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಬಚ್ಚಿಟ್ಟಿದ್ದ ಆರೋಪದಲ್ಲಿ ಸುಪ್ರೀಂಕೋರ್ಟ್ ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು.

ಇದೀಗ ದತ್ ಅವರ ಸನ್ನಡತೆಯ ಆಧಾರದ ಮೇಲೆ ಶಿಕ್ಷೆಯನ್ನು ಕಡಿತಗೊಳಿಸಿರುವ ಮಹಾರಾಷ್ಟ್ರ ಸರ್ಕಾರ 8 ತಿಂಗಳಿಗೆ ಮುಂಚಿತವಾಗಿ  ಬಿಡುಗಡೆಗೆ ಆದೇಶ ನೀಡಿದೆ. 2013 ಮೇನಿಂದ ಈವರೆಗೆ ದತ್ ಹಲವಾರು ಬಾರಿ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. 
 

Share this Story:

Follow Webdunia kannada