Select Your Language

Notifications

webdunia
webdunia
webdunia
webdunia

ಸಂಜಯ್ ದತ್‌ಗೆ ಮತ್ತೆ ಪೆರೋಲ್

ಸಂಜಯ್ ದತ್‌ಗೆ ಮತ್ತೆ ಪೆರೋಲ್
ಮುಂಬೈ , ಬುಧವಾರ, 26 ಆಗಸ್ಟ್ 2015 (13:53 IST)
ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಪೆರೋಲ್ ಮೇಲೆ ಹೊರಬರಲಿದ್ದಾರೆ. ತಮ್ಮ ಪುತ್ರಿಗೆ ಮೂಗಿನ ಸರ್ಜರಿಯಾಬೇಕಿದೆ ಎಂಬ ಕಾರಣ ನೀಡಿ ಸಂಜಯ್ ದತ್ 30 ದಿನಗಳ ಅವಧಿಯ ಪೆರೋಲ್‌ನ್ನು ಪಡೆದುಕೊಂಡಿದ್ದಾರೆ.
 
ವಿಐಪಿ ಎಂಬ ಕಾರಣಕ್ಕೆ ಪದೇಪದೇ ಪೆರೋಲ್ ನೀಡಲಾಗುತ್ತಿದೆ ಎಂಬ ಟೀಕೆಗಳಿದ್ದರೂ ಅವರು ಮತ್ತೆ ಪೆರೋಲ್ ಪಡೆಯಲು ಯಶಸ್ವಿಯಾಗಿದ್ದಾರೆ. 
 
ಪುಣೆಯ ವಿಭಾಗೀಯ ಆಯುಕ್ತರು 2 ದಿನಗಳ ಹಿಂದೆಯೇ ಸಂಜಯ್ ದತ್​ಗೆ ಪೆರೋಲ್ ನೀಡಿದ್ದಾರೆ. ಪೆರೋಲ್ 30 ದಿನಗಳ ಅವಧಿಯದ್ದಾಗಿದ್ದೂ, ಮತ್ತೆ 60 ದಿನಗಳವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಬಾರಿ ಅವರು 90ದಿನಗಳ ಕಾಲ ಜೈಲಿನಿಂದ ಹೊರಗಿರುವ ಅವಕಾಶ ಪಡೆಯುವ ಸಾಧ್ಯತೆ ಇದೆ. 
 
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸಹ ಅವರು ಪೆರೋಲ್ ಮೇಲೆ ಹೊರಗೆ ಬಂದಿದ್ದರು. ಪೆರೊಲ್ ಅವಧಿ ಹೆಚ್ಚಿಸುವಂತೆ ಅವರು ಆಗ ಅರ್ಜಿಯನ್ನು ಸಲ್ಲಿಸಿದ್ದರಾದರೂ ಅದು ತಿರಸ್ಕರಿಸಲ್ಪಟ್ಟಿತ್ತು. ಮೇ 2013 ಮತ್ತು 2014ರ ಅವಧಿಯಲ್ಲಿ ಅವರು 118 ದಿನಗಳ ಕಾಲ ಜೈಲಿನಿಂದ ಹೊರಗಿದ್ದರು.
 
257 ಮಂದಿಯನ್ನು ಬಲಿ ತೆಗೆದುಕೊಂಡ 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದ ಅಪರಾಧಿಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದ ಆರೋಪದ ಮೇಲೆ 56ರ ವಯಸ್ಸಿನ ದತ್‌ಗೆ ಟಾಡಾ ನ್ಯಾಯಾಲಯ 2007ರಲ್ಲಿ 6 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ದತ್ 18 ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಹೊರಗಿದ್ದರು. ಟಾಡಾ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್‌, ಶಿಕ್ಷೆಯನ್ನು 6ರಿಂದ 5 ವರ್ಷಕ್ಕೆ ಇಳಿಸಿತು. ಕೋರ್ಟ್‌ ಆದೇಶದಂತೆ 2013ರಿಂದ ಮತ್ತೆ ಅವರು ಪುಣೆಯ ಯರವಾಡಾ ಜೈಲಿಗೆ ಕಳುಹಿಸಲ್ಪಟ್ಟರು. 
 
ಮುನ್ನಾಭಾಯಿ ಸಿನಿಮಾ ಖ್ಯಾತಿಯ ದತ್ ಆಮೀರ್ ಖಾನ್ ಅಭಿನಯದ ಪಿಕೆ(2014) ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. 

Share this Story:

Follow Webdunia kannada