Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾವನ್ನು ಹಾಡಿ ಹೊಗಳಿದ ಎ.ಆರ್ ರೆಹಮಾನ್ ಹಾಗೂ ಪ್ರಭುದೇವ್

ಕನ್ನಡ ಸಿನಿಮಾವನ್ನು ಹಾಡಿ ಹೊಗಳಿದ ಎ.ಆರ್ ರೆಹಮಾನ್ ಹಾಗೂ ಪ್ರಭುದೇವ್
ಮುಂಬೈ , ಮಂಗಳವಾರ, 16 ಫೆಬ್ರವರಿ 2016 (20:31 IST)
ಕನ್ನಡದಲ್ಲಿ ಸದ್ಯ ಹೊಸಬರ ಅಲೆ ಶುರುವಾಗಿದೆ. ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇದೀಗ ಇಂತಹದ್ದೇ ಹೊಸಬರ ಸಿನಿಮಾವೊಂದು ರಿಲೀಸ್ ಗೆ ರೆಡಿಯಾಗಿದೆ. ಅದುವೇ ನನ್  ಲವ್ ಟ್ರ್ಯಾಕ್. ಈ ಸಿನಿಮಾಕ್ಕೆ ತೆಲುಗು ತಮಿಳು ಹಾಗೇ ಹಿಂದಿಯ ಖ್ಯಾತ ನಟರು ಶುಭ ಕೋರಿದ್ದಾರೆ.
 
ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಕ್ಷಿತ್ ಅಭಿನಯಿಸಿರುವ ಸಿನಿಮಾ ನನ್ ಲವ್ ಟ್ರ್ಯಾಕ್. ಈ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.ರಕ್ಷಿತ್ ಅಭಿನಯದ ಈ ರೋಮ್ಯಾಂಟಿಕ್ ಸಿನಿಮಾಕ್ಕೆ ಅನೇಕ ತಾರೆಯರು ಶುಭ ಕೋರಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ . ರೆಹಮಾನ್ , ಖ್ಯಾತ ನಟ ನಿರ್ದೇಶಕ ಪ್ರಭುದೇವ್,ಹಾಗೇ ನಟ ಸೋನು ಸೂದ್ ಅವರು ವಿಡಿಯೋ ಮೂಲಕ ಶುಭ ಕೋರಿದ್ದಾರೆ.ಅಂದ್ಹಾಗೆ ನನ್ ಲವ್ ಟ್ರ್ಯಾಕ್ ಸಿನಿಮಾವನ್ನು ಕಾಲಿವುಡ್ ನ ಖ್ಯಾತ ನಿರ್ದೇಶಕ ಕಥೀರ್ ಅವರು ನಿರ್ದೇಶನ ಮಾಡಿದ್ದಾರೆ.ಅವರ ನಿರ್ದೇಶನದ ಸಿನಿಮಾ ಅಂದ್ರೆ ಅದು ಖಂಡಿತವಾಗಿಯೂ ಯಶಸ್ಸು ಪಡೆಯುತ್ತೆ ಅಂತಾ ಅವರು ಹೇಳಿದ್ದಾರೆ.
 
ನನ್ ಲವ್ ಟ್ರ್ಯಾಕ್ ಸಿನಿಮಾ ಕಲರ್ ಫುಲ್ ಸಿನಿಮಾ.ಅಲ್ಲದೇ ಈ ಸಿನಿಮಾ ಯುವಜನತೆಗೆ ತುಂಬಾನೇ ಇಷ್ಟವಾಗುತ್ತೆ ಅಂತಾ ಸಿನಿಮಾದ ನಿರ್ದೇಶಕ ಕಥೀರ್ ಅವರು ಹೇಳಿದ್ದಾರೆ.ಅಲ್ಲದೇ ನಟ ಸೋನು ಸೂದ್ ಕೂಡ ನಿರ್ದೇಶಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸಿನಿಮಾದಲ್ಲಿ ರಕ್ಷಿತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಿಧಿ ಕುಶಾಲಪ್ಪ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
 

Share this Story:

Follow Webdunia kannada