Webdunia - Bharat's app for daily news and videos

Install App

ಸಿಂಗರ್ ಆದ್ರು ನಟ ಸಂಚಾರಿ ವಿಜಯ್

Webdunia
ಶುಕ್ರವಾರ, 20 ಮೇ 2016 (12:25 IST)
ಸ್ಯಾಡಲ್‌ವುಡ್‌ನಲ್ಲಿ ಈಗಾಗಲೇ ಅನೇಕ ನಟರು ನಾವು ಅಭಿನಯಿಸೋದಕ್ಕೂ ಸೈ ಹಾಗೇ ಗಾಯನಕ್ಕೂ ಜೈ ಅಂತಾ ತೋರಿಸಿಕೊಟ್ಟಿದ್ದಾರೆ. ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್ , ದುನಿಯಾ ವಿಜಿ ಹೀಗೇ ಅನೇಕ ನಟರು ಹಾಡುಗಾರಿಕೆಯಲ್ಲೂ ನಾವೇನು ಕಡಿಮೆಯಿಲ್ಲ ಅಂತಾ ತೋರಿಸಿಕೊಟ್ಟಿದ್ದಾರೆ. 
ಇದೀಗ ಅದೇ ಸರದಿ ಸಂಚಾರಿ ವಿಜಯ್ ಅವರದ್ದು.ನಾನು ಅವನಲ್ಲ ಅವಳು ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಂಚಾರಿ ವಿಜಯ್ ಅವರಿಗೆ ಆ ಬಳಿಕ ಉತ್ತಮ ಅವಕಾಶಗಳು ದೊರೆಯಲೇ ಇಲ್ಲ. ಸಣ್ಣ ಪುಟ್ಟ ಪಾತ್ರಗಳಲ್ಲೇ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದರು. 
 
ಇದೀಗ ಅವರು ಅಭಿನಯ ಮಾತ್ರವಲ್ಲದೇ ನಾನು ಗಾಯನಕ್ಕೂ ನಾನು ಮುಂದು ಅಂತಾ ತೋರಿಸಿದ್ದಾರೆ.ರಿಕ್ತ ಅನ್ನೋ ಹೊಸ ಸಿನಿಮಾದಲ್ಲಿ ನೋಡ್ತಾ ನೋಡ್ತಾ ಗೆದ್ದವಳು ಅನ್ನೋ ಹಾಡನ್ನು ವಿಜಯ್ ಹಾಡಿದ್ದಾರೆ. ನಾನು ಹಾಡಲ್ಲ ಅಂತಿದ್ದ ಸಂಚಾರಿ ವಿಜಯ್ ಅವರನ್ನು ಸಿನಿಮಾದ ನಿರ್ದೇಶಕ ಅಮೃತ್ ಕುಮಾರ್ ಅವರು ಒತ್ತಾಯ ಮಾಡಿ ಹಾಡಿಸಿದ್ರಂತೆ.
 
ಇನ್ನು ಸಂಚಾರಿ ವಿಜಯ್ ತಾನು ನಟನಾಗೋ ಮೊದಲು ಗಾಯಕನಾಗಬೇಕು ಅಂತಾ ಅಂದುಕೊಂಡಿದ್ದರಂತೆ.ಅದಕ್ಕಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕೂಡ ಅಭ್ಯಾಸ ಮಾಡಿದ್ರಂತೆ.ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ರಂತೆ.ಆದ್ರೆ ಅಲ್ಲಿ ಅಭ್ಯಾಸದ ಕೊರತೆ ಕಾಡಿದ್ರಿಂದ ಸ್ಪರ್ಧೆಯಿಂದ ಹೊರ ಬಿದ್ರಂತೆ ವಿಜಯ್.ಆದ್ರೀಗ ರಿಕ್ತಾ ಸಿನಿಮಾದ ಮೂಲಕ ಸಂಚಾರಿ ವಿಜಯ್ ಹಳೇ ಕನಸು ಈಡೇರಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments