Select Your Language

Notifications

webdunia
webdunia
webdunia
webdunia

ಸಮಂತಾಗೆ ಈಗ 50 ಲಕ್ಷ ಅಭಿಮಾನಿಗಳು.. ಇದ್ದಾರಂತೆ.. ವಾವ್ ಸಮಂತಾ

ಸಮಂತಾಗೆ ಈಗ 50 ಲಕ್ಷ ಅಭಿಮಾನಿಗಳು.. ಇದ್ದಾರಂತೆ.. ವಾವ್ ಸಮಂತಾ
, ಮಂಗಳವಾರ, 22 ಏಪ್ರಿಲ್ 2014 (09:49 IST)
ದಕ್ಷಿಣ ಭಾರತದಲ್ಲಿ ಸಮಂತ   ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದ್ದೆ ಇದೆ. ಆಕೆಯ ಬಗ್ಗೆ ಆಸಕ್ತಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಪೂರಕವಾಗಿ ಆಕೆಯನ್ನು ಅಭಿಮಾನಿಸುವವರ ಸಂಖ್ಯೆ ಈಗ ಮತ್ತಷ್ಟು ಹೆಚ್ಚಾಗಿದೆ ಅನ್ನುವ ವಿಷಯ ಹೊರ ಬಿದ್ದಿದೆ.
 
 ಫೇಸ್ ಬುಕ್ ಮತ್ತು ಟ್ವೀಟ್ಟರ್ ನಲ್ಲಿ ಆಕೆಯನ್ನು ಫಾಲೋ  ಮಾಡುವ ಅಭಿಮಾನಿಗಳ ಸಂಖ್ಯೆ ಈಗ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಬರೋಬ್ಬರಿ 50 ಲಕ್ಷಗಳನ್ನು ದಾಟಿದೆ. ಅಲ್ಲದೆ ಟ್ವೀಟ್ಟರ್  ನಲ್ಲಿ ಆಕೆಯನ್ನು ಫಾಲೋ ಮಾಡುವವರ ಸಂಖ್ಯೆ ಈಗ 5 ಲಕ್ಷ ಮೀರಿದೆಯಂತೆ. 
 
ದಕ್ಷಿಣ ಭಾರತದಲ್ಲಿ ಹೀರೋಯಿನ್ ಗೆ ವೆಬ್ ಲೋಕದಲ್ಲಿ ಈ ಮಟ್ಟಿಗಿನ ಪಾಪ್ಯುಲಾರಿಟಿ ಸಿಕ್ಕಿಲ್ಲ. ಆದರೆ ಅದನ್ನು ಈಗ ಈಚೆಲುವೆ ದಾಖಲು ಮಾಡಿ ತೋರಿದ್ದಾಳೆ. ತಾನು ಬೇರೆ ಹೀರೋಯಿನ್ ಗಳಂತೆ ಅಲ್ಲ, ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎನ್ನುವ ಅಂಶವನ್ನು ಜಗತ್ತಿಗೆ ತೋರಿದ್ದಾಳೆ ಈ ಮುಖಾಂತರ. ಆದ್ದರಿಂದ ಸಮಂತ್ ಡೇಟ್ಸ್ ನೀಡಿದರೆ ಸಾಕು ಅಂತ ನಿರ್ಮಾಪಕರು ಒದ್ದಾಡುತ್ತಿರುತ್ತಾರೆ. ಯಾಕೆಂದ್ರೆ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಆಕೆಯ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ..
 
ಅಕ್ಕಿನೇನಿ ಕುಟುಂಬದ ಚಿತ್ರ  ಮನಂ ನಲ್ಲಿ ಸಮಂತ ಸಿಕ್ಕಾಪಟ್ಟೆ ಸುಂದರವಾಗಿದ್ದಾಳೆ ಎಂದು ಈ ಚಿತ್ರದ ರಶಸ್ ನೋಡಿದವರು ಹೇಳುತ್ತಿದ್ದಾರೆ. ಸದ್ಯಕ್ಕೆ ಈಕೆ ಕಾಲಿವುಡ್ ನಲ್ಲಿ ದೊಡ್ಡ ಹೀರೋಗಳ ಜೊತೆ, ಟಾಲಿವುಡ್ ನಲ್ಲಿ ಯಂಗ್ ಹೀರೋಗಳ ಜೊತೆಯಾಗಿ ನಟಿಸುತ್ತಾ ಬ್ಯಾಲೆನ್ಸ್ ಮಾಡ್ತಾ ತನ್ನ ಕೇಜ್ ದಿನೇದಿನೇ ಹೆಚ್ಚಿಸಿಕೊಳ್ಳುತ್ತಾ ಇದ್ದಾಳೆ.  

Share this Story:

Follow Webdunia kannada