Webdunia - Bharat's app for daily news and videos

Install App

ಕತ್ರಿನಾ ಹುಟ್ಟುಹಬ್ಬಕ್ಕೆ ಸಲ್ಮಾನ್ ನೀಡಿದ ಗಿಫ್ಟೇನು...?

Webdunia
ಶನಿವಾರ, 15 ಜುಲೈ 2017 (13:55 IST)
ಮುಂಬೈ:ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮತ್ತೆ ಒಂದಾಗಿದ್ದಾರೆ. ಮತ್ತೆ ಇವರಿಬ್ಬರ ನಡುವಿನ ಪ್ರೇಮಕ್ಕೆ ಮರುಜೀವ ಸಿಕ್ಕಿದೆಯೆ ಎಂಬ ಮಾತುಗಳು ಹರಿದಾಡುತ್ತಿರುವಾಗಲೇ ಈ ಸುದ್ದಿಗಳಿಗೆ ಇನ್ನಷ್ಟು ಪುಷ್ಟಿ ನೀಡುವಂತಹ ಸಂದರ್ಭಕ್ಕೆ ಮುಂಬೈ ನಗರಿ ಸಾಕ್ಷಿಯಾಗಿದೆ.
 
ನಟಿ ಕತ್ರಿನಾ ಅವರ 34ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಬಾಲಿವುಡ್ ಗಣ್ಯಾತಿಗಣ್ಯರು ಪಾಲ್ಗೊಂಡು ಕತ್ರಿನಾಗೆ ಶುಭಕೋರಿದ್ದಾರೆ. ಈ ಸಮಾರಂಭಕ್ಕೆ ನಟ ಸಲ್ಮಾನ್ ಖಾನ್ ಕೂಡಾ  ಹಾಜರಿದ್ದಿದ್ದು ವಿಶೇಷವಾಗಿತ್ತು. ಮಾತ್ರವಲ್ಲ ತನ್ನ ಮಾಜಿ ಪ್ರೇಯಸಿಯ ಜನ್ಮದಿನಕ್ಕೆ ಗಣ್ಯಾತಿಗಣ್ಯರ ಸಮ್ಮುಖದಲ್ಲೇ ಸಲ್ಮಾನ್ ಪ್ರೀತಿಯಿಂದ ತಬ್ಬಿ ಸಿಹಿಮುತ್ತಿನ ಉಡುಗೊರೆ ನೀಡಿದ್ದಾರೆ. 
 
ಸಲ್ಮಾನ್ ಅವರ ಈ ರೀತಿಯ ವಿಶ್ ಗೆ ಕತ್ರಿನಾ ಕೂಡಾ ನಯವಾಗಿಯೇ ಸ್ಪಂದಿಸಿ ಮುಗುಳುನಗೆ ಬೀರಿದರು. ಇತ್ತೀಚೆಗಷ್ಟೆ ನಡೆದ ಐಫಾ 2017 ಪ್ರಶಸ್ತಿ ಕಾರ್ಯಕ್ರಮದಲ್ಲಿ ಕತ್ರಿನಾ ಹಾಗೂ ಸಲ್ಮಾನ್ ಖಾನ್  ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಹಾಗಾಗಿ ಈ ತಾರಾ ಜೋಡಿ ನಡುವೆ ಮತ್ತೆ ಪ್ರೇಮಾಂಕುರವಾಗಿದೆಯೇ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments