Select Your Language

Notifications

webdunia
webdunia
webdunia
webdunia

ಪ್ರೇಮಿಗಳ ದಿನಕ್ಕೆ ಫುಲ್ ರೆಡಿಯಾಗಿದ್ದಾರೆ ಸಲ್ಮಾನ್ ಖಾನ್

ಪ್ರೇಮಿಗಳ ದಿನಕ್ಕೆ ಫುಲ್ ರೆಡಿಯಾಗಿದ್ದಾರೆ ಸಲ್ಮಾನ್ ಖಾನ್
, ಮಂಗಳವಾರ, 9 ಫೆಬ್ರವರಿ 2016 (11:14 IST)
ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ. ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಪ್ರೇಮಿಗಳು ಹೇಗೆ ರೆಡಿಯಾಗಿದ್ದಾರೋ ಗೊತ್ತಿಲ್ಲ. ಆದ್ರೆ ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಮಾತ್ರ ಈ ಬಾರಿಯ ಪ್ರೇಮಿಗಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುತ್ತಿದ್ದಾರೆ.

ಪ್ರೇಮಿಗಳ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ ಪ್ರೇಮಿಗಳ ದಿನಾಚರಣೆಗೆ ಸಲ್ಮಾನ್ ಖಾನ್ ತಮ್ಮ ಲುಕ್ ನ್ನು ಕೂಡ ಡಿಫರೆಂಟ್ ಆಗಿ ಮಾಡಿಕೊಂಡಿದ್ದಾರೆ.ಅದು ಹೇಗಪ್ಪಾ ಅಂದ್ರೆ ಸಲ್ಲು ಭಾಯಿ ಫುಲ್ ಶೇವ್ ಮಾಡಿಕೊಂಡು ಲವರ್ ಬಾಯ್ ಲುಕ್ ನಲ್ಲಿ ಮಿಂಚುತ್ತಿದ್ದಾರಂತೆ, ಇನ್ನು ಸಲ್ಲು ಭಾಯಿಯನ್ನು ನೋಡಿದವರೆಲ್ಲಾ ಅಯ್ಯೋ ವರ್ಷ ಐವತ್ತಾದ್ರೂ ಸಲ್ಮಾನ್ ಮಾತ್ರ ಇನ್ನೂ 20ರ ಯುವಕನಂತಿದ್ದಾರಲ್ವಾ ಅಂತಿದ್ದಾರಂತೆ ಬಾಲಿವುಡ್ ಮಂದಿ.
 
ಇನ್ನು ತಾವು ಕ್ಲೀನ್ ಶೇವ್ ಮಾಡಿಕೊಂಡಿರುವ ಫೋಟೋವನ್ನು ಸಲ್ಲು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಪ್ರೇಮಿಗಳ ದಿನಾಚರಣೆಗಾಗಿ ಸುಲ್ತಾನ್ ನ ಹೊಸ ಅವತಾರ ಅಂತಾ ಹೇಳಿದ್ದಾರೆ. ಫೋಟೋ ನೋಡುತ್ತಿದ್ರೆ ಸಲ್ಮಾನ್ ಖಾನ್ ಅವರಿಗೂ 50 ವರ್ಷ ಅಂತಾ ಯೂರೂ ಕೂಡ ನಂಬೋದಕ್ಕೆ ಸಾಧ್ಯಾನೇ ಆ ರೀತಿ ಸಲ್ಮಾನ್ ಖಾನ್ ಫೋಟೋದಲ್ಲಿ ಮಿಂಚುತ್ತಿದ್ದಾರೆ.

Share this Story:

Follow Webdunia kannada