Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಹೊಂದಿರೋದು ನಕಲಿ ಸಿಕ್ಸ್ ಪ್ಯಾಕ್ ??

ಸಲ್ಮಾನ್ ಖಾನ್ ಹೊಂದಿರೋದು ನಕಲಿ ಸಿಕ್ಸ್ ಪ್ಯಾಕ್ ??
, ಶುಕ್ರವಾರ, 26 ಸೆಪ್ಟಂಬರ್ 2014 (11:13 IST)
ಬಾಲಿವುಡ್ ನಲ್ಲಿ ತನ್ನ ಬಾಡಿ ಮೂಲಕವೂ ಸಹಿತ ಗಮನ ಸೆಳೆದಿರುವ ನಟ ಸಲ್ಮಾನ್ ಖಾನ್.. ಐವತ್ತರ ವಯೋಮಿತಿಯನ್ನು ಸಮೀಪಿಸುತ್ತಿದ್ದರೂ ಸಹಿತ ಇನ್ನು ಯಂಗ್ ಯಂಗ್ ಆಗಿ ಇರುವ ಈ ಕಲಾವಿದರನ್ನು ಬೈಸೆಪ್ಸ್, ಕಟ್ಸ್ ವೀರ  ಎಂದು ಸಹಿತ ಕರೆಯುತ್ತಾರೆ. ಆತ ಏಕ್ತಾ ಟೈಗರ್ ಚಿತ್ರದಲ್ಲಿ ತನ್ನ ಶರ್ಟ್ ಬಿಚ್ಚಿ ಆರು ಪ್ಯಾಕ್ ಗಳನ್ನೂ ಜಗತ್ತಿಗೆ ತೋರಿಸಿದ್ದರು.ಸಿಕ್ಸ್ ಪ್ಯಾಕ್ ತೋರಿಸುವುದರ ಮೂಲಕ ಆತ ತನ್ನ ಅಭಿಮಾನಿಗಳ ಖುಷಿಯ ಶಾಕ್ ನೀಡಿದ್ದರು.
ಆದರೆ ಈಗ ಅವರಿಗೆ ಈಗ ಮತ್ತೊಂದು ರೀತಿಯ ಶಾಕ್ ಎದುರಾಗಿದೆ. ಸಲ್ಮಾನ್ ಗೆ ಸಂಬಂಧಪಟ್ಟಂತೆ ಒಂದು ವೀಡಿಯೋ ಈಗ ವೆಬ್ ಮೀಡಿಯಾದಲ್ಲಿ ಸಾಕಷ್ಟು ಗಲಾಟೆ ಉಂಟು ಮಾಡುತ್ತಿದೆ. ಆ ವೀಡಿಯೋದಲ್ಲಿ ಸಲ್ಮಾನ್ ಖಾನ್ ಶರ್ಟ್  ಧರಿಸಿಲ್ಲ. ಆದರೆ ಅದೇನು ದೊಡ್ಡ ಸಂಗತಿಯಲ್ಲ, ಏಕೆಂದರೆ ಇಂತಹ ದೃಶ್ಯ ಸಾಕಷ್ಟು ಬಾರಿ ಕಂಡಿದ್ದೇವೆ, ಇಲ್ಲಿ ಸಲ್ಮಾನ್ ಖಾನ್ ಅವರ ಚಿತ್ರಗಳಲ್ಲಿ ಕಂಡು ಬರುವ ಸಿಕ್ಸ್ ಪ್ಯಾಕ್ ಮಾತ್ರ ಕಾಣಿಸುತ್ತಿಲ್ಲ. ಹಾಗಾದರೆ ಸಿಕ್ಸ್ ಪ್ಯಾಕ್ ಎಲ್ಲಿ ಮಾಯವಾಯ್ತು ಎನ್ನುವುದೇ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ? ಕಂಪ್ಯೂಟರ್ ಗಿಮಿಕ್ ನಿಂದ ಸಲ್ಮಾನ್ ಸಿಕ್ಸ್ ಪ್ಯಾಕ್ ತೋರಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಗೊಂದಲಕ್ಕೆ ಸಲ್ಮಾನ್ ಏನ್ ಉತ್ರ ನೀಡುತ್ತಾರೊ ವೇಟ್ ವೇಟ್ !!

Share this Story:

Follow Webdunia kannada