Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಅವರು ತಮ್ಮ ವಿವಾಹದ ಬಗ್ಗೆ ಹೇಳಿದ್ದೇನು?

ಸಲ್ಮಾನ್ ಖಾನ್ ಅವರು ತಮ್ಮ ವಿವಾಹದ ಬಗ್ಗೆ ಹೇಳಿದ್ದೇನು?
ಮುಂಬೈ , ಬುಧವಾರ, 25 ಮೇ 2016 (10:13 IST)
ಮೊನ್ನೆಯಷ್ಟೇ ಸಲ್ಮಾನ್ ಖಾನ್ ಹಾಗೂ ತನ್ನ ವಿವಾಹದ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ ಗೆಳತಿ ಲುಲಿಯಾ ವೆಂಟರ್ ತಮ್ಮ ಹಾಗೂ ಸಲ್ಲು ವಿವಾಹದ ಬಗ್ಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಉತ್ತರ ನೀಡಿದ್ರು. ನಾನು ಹಾಗೂ ಸಲ್ಲು ಸದ್ಯ ವಿವಾಹವಾಗುವ ಆಲೋಚನೆ ಇಲ್ಲ ಅಂತಾ ಅವರು ಹೇಳಿದ್ದರು.ಆದ್ರೆ ಸಲ್ಲು ಮಾತ್ರ ಸೈಲೆಂಟ್ ಆಗಿದ್ರು.ಆದ್ರೀಗ ಅವರು ಮೌನ ಮುರಿದಿದ್ದಾರೆ.
ಸಲ್ಮಾನ್ ಖಾನ್ ಇತ್ತೀಚೆಗೆ ಸಂದರ್ಸನವೊಂದರಲ್ಲಿ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಇಷ್ಟು ಸಲ್ಲು ಇದೇ ವರ್ಷ ತನ್ನ ಗೆಳತಿ ಲುಲಿಯಾ ಅವರನ್ನು ವಿವಾಹವಾಗುತ್ತಾರೆ ಅಂತಾ ಸುದ್ದಿ ಹಬ್ಬಿತ್ತು.ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್ ಈ ವರ್ಷ ನಾನು ವಿವಾಹವಾಗುವ ಯೋಚನೆಯಲಿಲ್ಲ. 
 
ಯಾವಾಗ ಮದುವೆ ಅನ್ನೋದು ನನ್ನ ಹಣೆಯಲ್ಲಿ ಇದುವರೆಗೂ ಬರೆದಿಲ್ಲ.ಒಂದು ವೇಳೆ ನನ್ನ ವಿವಾಹ ಯಾವಾಗ ಅನ್ನೋದು ಖಚಿತವಾದ್ರೆ ನಾನು ನಿಮಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೇ ಫೇಸ್ ಬುಕ್ ಮೂಲಕ ಹೇಳುತ್ತೇನೆ. ದಯವಿಟ್ಟು ಅಲ್ಲಿವರೆಗೂ ಕಾಯಿರಿ ಅಂದಿದ್ದಾರೆ.
 
ಇನ್ನು ಮೊನ್ನೆ ಪ್ರೀತಿ ಝಿಂಟಾ ಅವರ ಆರತಕ್ಷತೆ ಕಾರ್ಯಕ್ರಮದಲ್ಲೂ ಲುಲಿಯಾ ಹಾಗೂ ಸಲ್ಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಅವರಿಬ್ಬರು ಶೀಘ್ರದಲ್ಲೇ ವಿವಾಹವಾಗುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಇದೀಗ ಸಲ್ಮಾನ್ ಖಾನ್ ಅವರೇ ಈ ಸುದ್ದಿಗೆ ಕೊಂಚ ವಿರಾಮ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ಆಗಿ ಮಿಂಚಲು ಅಕ್ಕಿಗೆ ಕಾರಣವಾಗಿದ್ದು ಯಾವುದು..?