Select Your Language

Notifications

webdunia
webdunia
webdunia
webdunia

ಅರ್ಪಿತ ಖಾನ್ ಮೆಹಂದಿ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಹಾಜರಿ

ಅರ್ಪಿತ ಖಾನ್ ಮೆಹಂದಿ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಹಾಜರಿ
, ಮಂಗಳವಾರ, 18 ನವೆಂಬರ್ 2014 (10:22 IST)
ಬಾಲಿವುಡ್ ನಲ್ಲಿ ಈಗ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತ ಖಾನ್ ಮದುವೆ ಬಗ್ಗೆ ಮಾತುಗಳು ಮತ್ತು ಕಥೆಗಳು. ತನ್ನ ತಂಗಿಯ ಮದುವೆಗೆಂದು ಸಾಕಷ್ಟು ಮೊತ್ತ ಖರ್ಚು ಮಾಡಿದ್ದಾರೆ ಸಲ್ಮಾನ್ ಖಾನ್. ಈ ಮದುವೆ ಹೈದರಾ‌ಬಾದ್ ನಲ್ಲಿರುವ ಪ್ರತಿಷ್ಠಿತ ಫಲಕ್ ನುಮ ಗೆಲಾಕ್ಸಿ ಗ್ರಾಂಡ್ ರೆಸಿಡೆನ್ಸಿಯಲ್ಲಿ ನಡೆಯಲಿದೆ ಇಂದು ಮುಹೂರ್ತ.


ದೆಹಲಿ ಮೂಲದ ಬ್ಯುಸಿನೆಸ್ ಮ್ಯಾನ್ ಆಯುಶ್ ಶರ್ಮ ಅವರ ಜೊತೆ ಅರ್ಪಿತಾಹಸೆಮಣೆ ಏರುತ್ತಿರುವ ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ. ನಿನ್ನೆ ಫಲಕ್ ನುಮದಲ್ಲಿ ಮೆಹಂದಿ ಕಾರ್ಯಕ್ರಮ ನೆರವೇರಿತು. ಆ ಕಾರ್ಯಕ್ರಮದಲ್ಲಿ ಹೆಲೆನ್, ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸಂಗೀತ ಬಿಜಲಾನಿ, ಅತುಲ್ ಅಗ್ನಿ ಹೋತ್ರಿ ಮುಂತಾದವರು ಭಾಗವಹಿಸಿದ್ದರು. 
 
ಅದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಕುಟುಂಬ ಸದಸ್ಯರು ಹೈದರಾಬಾದ್‌ನಲ್ಲಿರುವ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಾಕಷ್ಟು ಬಂದೋಬಸ್ತ್ ನಡುವೆ ಸೇರಿದ್ದರು. ಅಲ್ಲಿಂದ ಅವರೆಲ್ಲರೂ ಫಲಕ್ ನುಮಾಗೆ ಹೋದರು. ಸೋಮವಾರ ಸಂಜೆ ಸಂಗೀತ ಕಾರ್ಯಕ್ರಮ ಸಹ ಏರ್ಪಾಟಾಗಿತ್ತು. 

Share this Story:

Follow Webdunia kannada