Select Your Language

Notifications

webdunia
webdunia
webdunia
webdunia

ಮಿತಿ ಮೀರಿದ ಜಾಕ್ವೆಲಿನ್ ಸಲ್ಲು ಮಿಯಾ ಡೇಟಿಂಗ್ ಕಥೆ !

ಮಿತಿ ಮೀರಿದ ಜಾಕ್ವೆಲಿನ್ ಸಲ್ಲು ಮಿಯಾ  ಡೇಟಿಂಗ್  ಕಥೆ !
, ಶನಿವಾರ, 19 ಜುಲೈ 2014 (11:47 IST)
ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಡೇಟಿಂಗ್ ಅತಿ ಸಾಧಾರಣ ಸಂಗತಿ ಆಗಿದೆ. ಯಾವುದಕ್ಕೆ ಆಗಿರಲಿ ಮಿತಿ ಇರುತ್ತದೆ ಅದೇ ರೀತಿ ಡೇಟಿಂಗ್ ಸಹ ಮಿತಿ ಹೊಂದಿದೆ. ಆದರೆ ಶ್ರೀಲಂಕ ಮೂಲದ  ಜಾಕ್ವೆಲಿನ್ ಆ ಲಿಮಿಟ್ ಕ್ರಾಸ್ ಮಾಡಿದ್ದಾಳೆ. 

ಈಗ ಆಕೆ ಕಿಕ್ ಚಿತ್ರದ ಮುಖಾಂತರ ಸಲ್ಮಾನ್ ಖಾನ್ ಅವರ ಜೊತೆಯಾಗಿದ್ದಾಳೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಬದುಕಲ್ಲಿ ಸಹ ಆಕೆ ಸಲ್ಮಾನ್ ಜೊತೆಯಾಗಿದ್ದಾಳೆ. ಅದೇ ಈಗ ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಸುದ್ದಿ ಆಗಿದೆ.ಈ ಚಿತ್ರದ ಆರಂಭದಿಂದಲೂ ಸಹ ಈ  ಜೋಡಿಯ ವ್ಯವಹಾರ ಚಿತ್ರದ ಯೂನಿಟ್ ನಲ್ಲಿ ಅನೇಕ ಅನುಮಾನಗಳನ್ನು ಹುಟ್ಟಿಸಿತಂತೆ. 
 
ಇವರಿಬ್ಬರು ಸುಮಾರು 13 ದಿನಗಳ ಕಾಲ ಡೇಟಿಂಗ್ ಮಾಡಿದರಂತೆ ಎನ್ನುವ ಸುದ್ದಿ ಈಗ ಎಲ್ಲೆಲ್ಲು ಅದರಲ್ಲೂ ಬಾಲಿವುಡ್ ಮೀಡಿಯಾಗಳಲ್ಲಿ ದೊಡ್ಡ ಸಂಗತಿ ಆಗಿ ಮಾರ್ಪಟ್ಟಿದೆ. ಬಿಟೌನ್ ಜಾಕ್ವೆಲಿನ್ ಈ ಓಡಾಟ ಕಂಡು ದಂಗಾಗಿ ಹೋಗಿದೆ. ಇತ್ತೀಚಿಗೆ ನಡೆದ ಕಿಕ್ ಚಿತ್ರದ  ಪ್ರಮೋಶನ್   ಸಮಯದಲ್ಲೂ ಸಹ ಆಕೆ ಸಿಕ್ಕಾಪಟ್ಟೆ ಹೊಗಳಿದ್ದಾಳೆ ಸಲ್ಲು ಮಿಯಾರನ್ನು!

ತನ್ನನ್ನು ಪ್ರೋಮೊಟ್ ಮಾಡುವುದಕ್ಕೆ ಹೆಚ್ಚು ಗಮನ ನೀಡುತ್ತಿರುವ ಸಲ್ಮಾನ್ ನಿಜವಾದ ಹೀರೋ ಅಂತ ಹೇಳಿದ್ದಾಳೆ. ಸಲ್ಮಾನ್ ಖಾನ್ ತನ್ನ ಪ್ರತಿ ಚಿತ್ರದ ಹೀರೋಯಿನ್ ಗಳ ಜೊತೆ ಒಂದಷ್ಟು ಸುತ್ತಾಡಿ, ಸ್ವಲ್ಪ ಸುದ್ದಿ ಮಾಡಿ ಮತ್ತೊಂದು ಹೂ ಹುಡುಕುವುದು ಸಾಮಾನ್ಯ.. ಜಾಕ್ವೆಲಿನ್ ಸಹ ಅದರಲ್ಲಿ ಒಬ್ಬಳು ಅನ್ನುವ ಮಾತು ಸಹ ಕೇಳಿ ಬರ್ತಾ ಇದ್ರೂ ಸಹ ನಮಗೆ ಗೊತ್ತಿರೋ ಸುದ್ದಿ ಪ್ರಕಾರ ಸಲ್ಮಾನ್ ಖಾನ್ ಗೆ ಈಗ ಜಾಕ್ವೆಲಿನ್ ಮೇಲೆ ಇಷ್ಟಾಂದ್ರೆ   ಇಷ್ಟ ! 

webdunia
2009ರಲ್ಲಿ ಆಕೆ ಅಲ್ಲದೀನ್ ಚಿತ್ರದ ಮುಖಾಂತರ ಬಾಲಿವುಡ್ ಗೆ ಎಂಟ್ರಿ ಆದಳು. ಕಿಕ್ ಚಿತ್ರವನ್ನು ಸಾಜಿದ್ ನಡಿಯಾ ಡ್ವಾಳ ಅವರ ನಿರ್ದೇಶನವಿದೆ ಮತ್ತು ಭಗತ್ ಸಿಂಗ್ ಚಿತ್ರದ ಸಂಭಾಷಣೆ ಬರೆದಿದ್ದಾರೆ.  
 
7.ಸಲ್ಮಾನ್ ಖಾನ್ ಮನದಲ್ಲಿ ಅಡಗಿರುವ ಬಹುಮುಖ್ಯ ಸಂಗತಿಗಳ ವಿವರ ..! 

Share this Story:

Follow Webdunia kannada