Select Your Language

Notifications

webdunia
webdunia
webdunia
webdunia

ದಾಖಲೆ ಬರೆದ ಮರಾಠಿ ಚಿತ್ರ 'ಸೌರಾಟ್', ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಧಮಾಕಾ

ದಾಖಲೆ ಬರೆದ ಮರಾಠಿ ಚಿತ್ರ 'ಸೌರಾಟ್', ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಧಮಾಕಾ
ಮುಂಬೈ , ಶುಕ್ರವಾರ, 13 ಮೇ 2016 (12:06 IST)
ಬಾಕ್ಸ್ ಆಫೀಸ್‌ನಲ್ಲಿ ಮರಾಠಿ ಚಿತ್ರ 'ಸೌರಾಟ್' ದಾಖಲೆ ಬರೆದಿದೆ. ಚಿತ್ರ ತೆರೆ ಕಂಡ ಬೆನ್ನಲ್ಲೇ ಬರೋಬ್ಬರಿ 41.11 ಕೋಟಿ ಗಳಿಕೆ ಕಂಡಿದ್ದು, ಸದ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಕೊಳ್ಳೆ ಹೊಡೆದಿದೆ. ಇದ್ರಿಂದ ದೇಶದೆಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. 
ಈ ಬಗ್ಗೆ ವಿಶ್ಲೇಷಕ ತರಣ್ ಆದರ್ಶ ಟ್ವಿಟ್ ಮಾಡಿದ್ದಾರೆ, ಮರಾಠಿ ಚಿತ್ರ ಸೌರಾಟ್ ಇತಿಹಾಸ ಬರೆದಿದೆ ಎಂದು ತಿಳಿಸಿದರು. 
 
ಶುಕ್ರವಾರದಂದು ಚಿತ್ರ 3.84 ಕೋಟಿ ಗಳಿಕೆ ಕಂಡಿತ್ತು. ಇನ್ನೂ ಶನಿವಾರ 4.12 ಕೋಟಿ, ರವಿವಾರ 4.61 ಕೋಟಿ. ಅಲ್ಲದೇ ಸೋಮವಾರಕ್ಕೆ 3.04 ಕೋಟಿ ಗಳಿಕೆ ಕಂಡು, ಒಟ್ಟಾರೆಯಾಗಿ 41.11 ಕೋಟಿಯಷ್ಟು ಗಳಿಕೆ ಕಾಣುವುದರ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಧೂಳೆಬ್ಬಿಸುತ್ತಿದೆ. 
 
ಇನ್ನೂ ಚಿತ್ರದ ಬಗ್ಗೆ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಟ್ವಿಟ್ ಮಾಡಿದ್ದಾರೆ. ಚಿತ್ರ ನೋಡಿದ್ದೇನೆ. ಚಿತ್ರ ನಿಜಕ್ಕೂ ಸೂಪರ್, ಇದನ್ನು ನೋಡಿ ಆಘಾತಕಾರಿಯಾಯ್ತು. ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ ಎಂದ ಅವರು, ನಾಗರಾಜ್, ಅಜಯ್ ಅತುಲ್ಸ ರಿಂಕೂ ರಾಜ್‌ಗುರು, ಆಕಾಶ್ ತೋಸಾರ್, ಅರ್ಬಾಜ್ ಶೈಕಾ, ಇಡೀ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದ್ದಾರೆ. ಸೋ, ಚಿತ್ರವನ್ನು ವೀಕ್ಷಿಸಿ ಎಂದು ಅಮಿರ್ ಖಾನ್ ಟ್ವಿಟ್ ಮಾಡಿದ್ದಾರೆ.
 
ಇನ್ನೂ ನಟ ರಿತೇಶ್ ದೇಶಮುಖ್ ಸಹ ಮರಾಠಿ ಚಿತ್ರ 'ಸೌರಾಟ್' ಗಾಗಿ ಶುಭಾಷಯ ತಿಳಿಸಿದ್ದಾರೆ. ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡು ದಾಖಲೆ ಬರೆದ 'ಸೌರಾಟ್' ನಿಜಕ್ಕೂ ಇದೊಂದು ಬಿಗ್ ಹೈಯಸ್ಟ್ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

'ಫೆಮಿನಾ' ಕವರ್ ಪೇಜ್‌ನ ಸೆಕ್ಸಿ ಪೋಸ್‌ನಲ್ಲಿ ರಾಧಿಕಾ ಆಪ್ಟೆ