Webdunia - Bharat's app for daily news and videos

Install App

ಆ ಒಂದು ಸನ್ನಿವೇಶಕ್ಕಾಗಿ ರೂ.12 ಕೋಟಿ ಖರ್ಚು!

Webdunia
ಸೋಮವಾರ, 20 ಫೆಬ್ರವರಿ 2017 (08:54 IST)
ಭಾರತದಾದ್ಯಂತ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಎಷ್ಟೆಲ್ಲಾ ಅಭಿಮಾನಿಗಳಿದ್ದಾರೋ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಅವರು ಯಾವುದೇ ಸಿನಿಮಾ ಮಾಡಿದರು ಸೆನ್ಸೇಷನ್. ಆ ರೀತಿಯ ಸೆನ್ಸೇಷನ್ ಸೃಷ್ಟಿಸಿದ ಸಿನಿಮಾ ರೋಬೋ. ಇದೀಗ ಆ ಸಿನಿಮಾದ ಮುಂದುವರಿದ ಭಾಗ ಎಂದೇ ಹೇಳಲಾಗಿರುವ ’2.0’ ಬರುತ್ತಿರುವುದು ಗೊತ್ತೇ ಇದೆ.
 
ಅತ್ಯದ್ಭುತ ಗ್ರಾಫಿಕ್ಸನ್ನು ಹೊಂದಿದ್ದ ಚಿತ್ರ ರೋಬೋ. ಇದೀಗ ಶಂಕರ್ ಆಕ್ಷನ್ ಕಟ್‌ನಲ್ಲಿ ಬರುತ್ತಿರುವ 2.0 ಅದಕ್ಕೂ ಮೀರಿ ಗ್ರಾಪಿಕ್ಸ್‌ನಲ್ಲಿ ಮೂಡಿಬರುತ್ತಿದೆ. ಈಗಾಗಲೆ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಗಿದೆ. ಸದ್ಯಕ್ಕೆ ಬಹಳ ಮುಖ್ಯವಾದ ಫೈಟಿಂಗ್ ಭಾಗವನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಆಕಾಶದಲ್ಲಿ ನಡೆಯುವ ಫೈಟ್ ಸೀಕ್ವೆನ್ಸ್ ಇದು.
 
ಇದಕ್ಕಾಗಿ 12 ದಿನಗಳ ಶೆಡ್ಯೂಲ್ ಫಿಕ್ಸ್ ಮಾಡಲಾಗಿದೆ. ಈ ಹನ್ನೆರಡು ದಿನಗಳ ಖರ್ಚೆಷ್ಟು ಗೊತ್ತೇ? ದಿನಕ್ಕೆ ಒಂದು ಕೋಟಿ ರೂಪಾಯಿ. ಅಂದರೆ ಒಟ್ಟು ರೂ.12 ಕೋಟಿ ಖರ್ಚು ಮಾಡಲಾಗುತ್ತಿದೆ. ಆಕ್ಷನ್ ಸನ್ನಿವೇಶಗಳಿಗಾಗಿ ಭರ್ಜರಿ ಗ್ರಾಫಿಕ್ಸ್ ಬಳಸಲಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಅಗತ್ಯವಿರುವ ವಿಶೇಷ ಪರಿಕರಗಳನ್ನು ಬಳಸಿಕೊಳ್ಳಲು ಇಷ್ಟೆಲ್ಲಾ ಖರ್ಚು ಮಾಡಲಾಗುತ್ತಿದೆ.
 
ಅದೇ ರೀತಿ ಅತ್ಯದ್ಭುತ ಗ್ರಾಫಿಕ್ಸ್ ಮೂಲಕ ತೆರೆಗೆ ಬರುತ್ತಿರುವ ’ಬಾಹುಬಲಿ 2’ ಚಿತ್ರದ ಪರಿಣಾಮ 2.0 ಚಿತ್ರದ ಮೇಲೆ ಎಲ್ಲಿ ಬೀಳುತ್ತದೋ ಎಂಬ ಆತಂಕವೂ ಇದೆ.  ಹಾಗಾಗಿ ಪ್ರತಿ ಫ್ರೇಮನ್ನೂ ಬಹಳ ಜಾಗ್ರತ್ತೆಯಿಂದ ತೆರೆಗೆ ತರುತ್ತಿದ್ದಾರೆ ಶಂಕರ್. ಗ್ರಾಫಿಕ್ಸ್, ಪ್ರಮೋಷನ್‌ಗಾಗಿ ಈ ಚಿತ್ರದ ಒಟ್ಟಾರೆ ಬಜೆಟ್ ರೂ.450 ಕೋಟಿ ಎನ್ನುತ್ತವೆ ಮೂಲಗಳು.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಮುಂದಿನ ಸುದ್ದಿ
Show comments