Select Your Language

Notifications

webdunia
webdunia
webdunia
webdunia

ಅಜಯ್ ದೇವಗನ್ ಸಿಂಗಂ 2ಹೆಸರು ಬದಲಾವಣೆ?

ಅಜಯ್  ದೇವಗನ್  ಸಿಂಗಂ  2ಹೆಸರು ಬದಲಾವಣೆ?
ಮುಂಬೈ , ಶುಕ್ರವಾರ, 9 ಮೇ 2014 (10:26 IST)
ಸಿಂಗಂ ಚಿತ್ರವೂ ಸಾಕಷ್ಟು ವಿಷಯಗಳಿಂದ ಸುದ್ದಿ ಮಾಡಿತ್ತು. ಆ ಚಿತ್ರದಲ್ಲಿ ಕನ್ನಡಿಗರನ್ನು ಅವಹೇಳನ ಮಾಡಲಾಗಿದೆ ಎನ್ನುವ ಕೂಗು ಉಂಟಾಗಿ ಆ ಮುಖಾಂತರವೂ ಸಹ ಬಹಳಷ್ಟು ಗಲಾಟೆಗೆ ಕಾರಣ ಆಗಿತ್ತು. ಏನೇ ಆದರು ರೋಹಿತ್ ಶೆಟ್ಟಿ ನಿರ್ದೇಶನ ಆ ಚಿತ್ರವೂ ಯಶಸ್ವಿ ಆಗಿತ್ತು. 
 
ಇದರಲ್ಲಿ ಅಜಯ್ ದೇವಗನ್ ಮತ್ತು ಕಾಜಲ್ ಅಗರ್ವಾಲ್ ಮುಖ್ಯ ಭೂಮಿಕೆಯಲ್ಲಿ ಇದ್ದರು. ಈಗ ಈ ಚಿತ್ರ ಎರಡನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಇದರಲ್ಲಿ ಅಜಯ್ ಜೊತೆಯಾಗಿದ್ದಾರೆ ಕರೀನ ಕಪೂರ್ ಖಾನ್. 
 
ಇದರ ಚಿತ್ರೀಕರಣವನ್ನು ನಿರ್ದೇಶಕ ರೋಹಿತ್ ಶೆಟ್ಟಿ ತುಂಬಾ ಭರದಿಂದ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದರು ನಾವು ಈವರೆಗೂ ಈ ಚಿತ್ರಕ್ಕೆ ಸಿಂಗಂ 2  ಎಂದು ಟೈಟಲ್ ನೀಡಲಾಗಿದೆ ಎಂದು ತಿಳಿದಿದ್ದೆವು, ಆದರೆ ಅದ್ಯಾಕೋ ರೋಹಿತ್ ಶೆಟ್ಟಿಗೆ ಆ ಹೆಸರು ಬೇಡ ಅನ್ನಿಸಿದೆ, ಅದನ್ನು ಬದಲಾಯಿಸುವತ್ತ ಅವರು ಗಮನ ನೀಡಿದ್ದಾರೆ. ಈ ಚಿತ್ರವೂ ಸಿಂಗಂ ರಿಟರ್ನ್ಸ್ ಅನ್ನುವ ಹೆಸರಿನಿಂದ ಸ್ವಾತಂತ್ರ ದಿನಾಚರಣೆಯ ದಿನ ಜನರ ಮುಂದೆ ಬರಲಿದೆಯಂತೆ.ಈ ಚಿತ್ರವೂ ತಮಿಳು  ಹಿಟ್ ಚಿತ್ರದ  ರೀಮೇಕ್ ಚಿತ್ರವಾಗಿದೆ.  

Share this Story:

Follow Webdunia kannada