Select Your Language

Notifications

webdunia
webdunia
webdunia
webdunia

ಮಹಿಳೆ ಧರಿಸುವ ಉಡುಪಿನಿಂದ ಆಕೆಯ ಗೌರವ ನಿರ್ಧಾರವಾಗೋದಿಲ್ಲ- ವಿದ್ಯಾ ಬಾಲನ್

ಮಹಿಳೆ ಧರಿಸುವ ಉಡುಪಿನಿಂದ ಆಕೆಯ ಗೌರವ ನಿರ್ಧಾರವಾಗೋದಿಲ್ಲ- ವಿದ್ಯಾ ಬಾಲನ್
, ಶನಿವಾರ, 6 ಫೆಬ್ರವರಿ 2016 (10:40 IST)
ಮಹಿಳೆಯರು ಧರಿಸುವ ಉಡುಪುಗಳು ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಒಂದು ಕಾರಣ ಅನ್ನ ಮಾತುಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ.ಆದ್ರೆ ನಟಿ ವಿದ್ಯಾ ಬಾಲನ್ ಅವರು ಈ ಮಾತನ್ನು ಅಲ್ಲಗಳೆದಿದ್ದಾರೆ. ಇದು ಶುದ್ಧ ಸುಳ್ಳು ಅಂತಾ ತಿಳಿಸಿದ್ದಾರೆ.

ಮಹಿಳೆಗೆ ನಾವು ನೀಡುವ ಗೌರವ ಆಕೆ ತೊಡುವ ಬಟ್ಟೆಗಳಿಂದ ನಿರ್ಧಾರವಾಗೋದಿಲ್ಲ. ಯುವತಿಯರಿಗೆ ಹಾಗೇ ಮಹಿಳೆಯರಿಗೆ ಅವರಿಷ್ಟದ ಉಡುಪುಗಳನ್ನು ತೊಡುವ ಅವಕಾಶವಿದೆ.ಅವರು ತೊಡುವ ಉಡುಪುಗಳಿಂದ ಅವ ಗುಣಗಳನ್ನು ನಿರ್ಧರಿಸೋದು ಸರಿಯಲ್ಲ. ಮೊದಲು ಮಹಿಳೆಯರನ್ನು ನಾವು ನೋಡುವ ದೃಷ್ಟಿ ಬದಲಾಗಬೇಕು.ಆಗ ಎಲ್ಲವೀ ಸರಿಯಾಗುತ್ತೆ ಅಂತಾ ವಿದ್ಯಾ ಹೇಳಿದ್ದಾರೆ. 
 
ಅವರು ಯುತ್ ಫಾರ್ ಯುನಿಟಿ ಅನ್ನೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು.ಅಲ್ಲದೇ ಮಹಿಳೆಯರು ಅವರದ್ದೇ ಆದ ನಿಲುವನ್ನು ಹೊಂದಿರಬೇಕು.ಅಲ್ಲದೇ ಅದನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಧೈರ್ಯವಿರಬೇಕು ಆಗ ಮಾತ್ರ ಆಕೆ ನೆಮ್ಮದಿಯ ಬದುಕು ಸಾಗಿಸಬಹುದು.ದೇಶದಲ್ಲಿ ಮಹಿಳೆಯಿರಿಗೆ ಹಾಗೇ ಪುರುಷರಿಗೆ ಸಮಾನವಾದ ಸ್ಥಾನಮಾನಗಳಿರಬೇಕು ಆಗ ಮಾತ್ರ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ ಅಂತಾ ಅವರು ಹೇಳಿದ್ದಾರೆ.

Share this Story:

Follow Webdunia kannada