Webdunia - Bharat's app for daily news and videos

Install App

ತನ್ನ ಹಾಗೂ ದೀಪಿಕಾ ವಿವಾಹದ ಬಗ್ಗೆ ರಣ್ ವೀರ್ ಸಿಂಗ್ ಹೇಳಿದ್ದೇನು?

Webdunia
ಶುಕ್ರವಾರ, 15 ಜುಲೈ 2016 (10:58 IST)
ಸದ್ಯ ಬಾಲಿವುಡ್ ಅಂಗಳದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ ವಿಚಾರಗಳಲ್ಲಿ ಒಂದು ರಣ್ ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ವಿವಾಹ. ಅವರಿಬ್ಬರು ಶೀಘ್ರದಲ್ಲೇ ವಿವಾಹವಾಗುತ್ತಾರೆ ಅನ್ನೋ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ಸುದ್ದಿ ಹುಟ್ಟಿಕೊಂಡಿತ್ತು.ಆದ್ರೀಗ ಅದಕ್ಕೆ ರಣ್ ವೀರ್ ಸಿಂಗ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
 
ಮೊನ್ನೆ ತಾನೇ ನಟ ರಣ್ ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ತಮ್ಮ ಕುಟುಂಬದೊಂದಿಗೆ ಹಾಲಿಡೇ ಟ್ರಿಪ್ ಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ನಿನ್ನೆ ಟ್ರಿಪ್ ಮುಗಿಸಿ ಇಬ್ಬರೂ ಮುಂಬೈಗಂ ವಾಪಸ್ಸಾಗಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ರಣ್ ವೀರ್ ಸಿಂಗ್ ಅವರಲ್ಲಿ ನೀವು ಹಾಗೂ ದೀಪಿಕಾ ಶೀಘ್ರದಲ್ಲಿ ವಿವಾಹವಾಗುತ್ತಿರೋದು ನಿಜಾನಾ ಅಂತಾ ಕೇಳಿದ್ದಾರೆ. ಇದಕ್ಕೆ ರಣ್ ವೀರ್ ಕಾಮಿಡಿ  ಉತ್ತರ ನೀಡಿದ್ದಾರೆ.ಬೆಳ್ಳಂಬೆಳಗ್ಗೆ ಏನ್ ಪ್ರಶ್ನೆ ಕೇಳುತ್ತಿದ್ದೀರಿ. ನನಗೆ ಇನ್ನು ನಿದ್ದೆ ಬಿಟ್ಟಿಲ್ಲ. ನಿಮ್ಮ ಪ್ರಶ್ನೆ ಕೇಳಿದ ಬಳಿಕ ನನಗೆ ಗೊತ್ತಾಯ್ತು. ನಾನು ಮುಂಬೈಗೆ ವಾಪಸ್ಸಾಗಿದ್ದೇನೆ ಅಂತಾ ಕಾಮಿಡಿ ಮಾಡಿದ್ದಾರೆ.
 
ಸದ್ಯ ರಣ್ ವೀರ್ ಸಿಂಗ್ ಅವರು ಹೇಳುತ್ತಿರೋದನ್ನು ನೋಡಿದ್ರೆ ಇದು ರೂಮರ್ ಅನ್ನೋದು ಪಕ್ಕಾ ಆಗುತ್ತಿದೆ. ಇಬ್ಬರು ಸದ್ಯ ರಾಣಿ ಪದ್ಮಾವತಿ ಸಿನಿಮಾದಲ್ಲಿ ಅಭಿನಯಿಸುತ್ತಿರೋದರಿಂದ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಮೊದಲು ರಿಲ್ಯಾಕ್ಸ್ ಆಗೋದಕ್ಕೆ ಅಂತಾ ವಿದೇಶ ಸುತ್ತಿ ಬಂದಿದ್ದಾರೆ. ಅಷ್ಟರಲ್ಲಿ ಇಬ್ಬರ ವಿವಾಹದ ಬಗ್ಗೆ ನಾನಾ ಸುದ್ದಿ ಹುಟ್ಟಿಕೊಂಡಿತ್ತು.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments