Select Your Language

Notifications

webdunia
webdunia
webdunia
webdunia

28 ಕೆಜಿ ತೂಕ ಇಳಿಸಿಕೊಂಡ ರಣ್ ದೀಪ್ ಹೂಡಾ

28 ಕೆಜಿ  ತೂಕ ಇಳಿಸಿಕೊಂಡ ರಣ್ ದೀಪ್ ಹೂಡಾ
, ಶನಿವಾರ, 6 ಫೆಬ್ರವರಿ 2016 (10:37 IST)
ನಟ ನಟಿಯರು ಅವರ ಸಿನಿಮಾಗಳಿಗೆ ನಾನಾ ರೀತಿಯ ಕಸರತ್ತುಗಳನ್ನು ಮಾಡ್ತಾನೆ ಇರ್ತಾರೆ. ಪಾತ್ರಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳೋದು ಅವರಿಗೆ ಅನಿವಾರ್ಯ. ಇದೀಗ ರಣ್ ದೀಪ್ ಹೂಡಾ ಅವರದ್ದು ಕೂಡ ಅದೇ ಕಥೆ. ತಮ್ಮ ಸಿನಿಮಾಗಾಗಿ ರಣ್ ದೀಪ್ ಫುಲ್ ಚೇಂಛ್ ಆಗಿದ್ದಾರೆ.

ರಣ್ ದೀಪ್ ಸರಬ್‌ಜಿತ್ ಸಿಂಗ್ ಜೀವನಕಥೆಯಾಧಾರಿತ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ, ಸಿನಿಮಾದಲ್ಲಿ ಸರಬ್‌ಜಿತ್ ಆಗಿ ಕಾಣಿಸಿಕೊಳ್ಳುತ್ತಿರುವ ರಣ್ ದೀಪ್ ಹೂಡಾ ಅದಕ್ಕಾಗಿ ಬರೋಬ್ಬರಿ 28 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಬರೋಬ್ಬರಿ 94 ಕೆಜಿ ತೂಕವಿದ್ದ ರಣ್ ದೀಪ್ ಇದೀಗ 66 ಕೆಜಿಗೆ ತೂಕವನ್ನು ಇಳಿಸಿಕೊಂಡಿದ್ದಾರೆ. ಈ ಹಿಂದೆ ತಮ್ಮ ದೋ ಲಪ್ಜೋನ್ ಕಿ ಕಹಾನಿ ಸಿನಿಮಾಗಾಗಿ ಅವರು ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಸರ್ಬಜೀತ್ ಸಿನಿಮಾಗಾಗಿ ಮತ್ತೆ ತೂಕವನ್ನು ಇಳಿಸಿಕೊಂಡಿದ್ದಾರೆ.
 
ಇನ್ನು ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಕೂಡ ಅಭಿನಯಿಸುತ್ತಿದ್ದಾರೆ. ಸರ್ಬಜೀತ್ ಸಹೋದರಿ ದಲ್ಬೀರ್ ಕೌರ್ ಅವರ ಪಾತ್ರವನ್ನು ಐಶ್ ಅವರು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾವನ್ನು ಮೇರಿ ಕೋಮ್ ಸಿನಿಮಾವನ್ನು ನಿರ್ದೇಶಿಸಿದ್ದ ಒಮಂಗ್ ಕುಮಾರ್  ನಿರ್ದೇಶನ ಮಾಡುತ್ತಿದ್ದಾರೆ.

Share this Story:

Follow Webdunia kannada