Select Your Language

Notifications

webdunia
webdunia
webdunia
webdunia

ರಾಣ ದಗ್ಗುಬಾಟಿ 30 ಜನರ ಜೊತೆ ಡೇಟಿಂಗ್ ಮಾಡಿದ್ದಾರಂತೆ!

ರಾಣ ದಗ್ಗುಬಾಟಿ 30 ಜನರ ಜೊತೆ ಡೇಟಿಂಗ್  ಮಾಡಿದ್ದಾರಂತೆ!
, ಶನಿವಾರ, 18 ಏಪ್ರಿಲ್ 2015 (10:31 IST)
ಪಾಶ್ಚಿಮಾತ್ಯ ದೇಶಗಳಲ್ಲಿ ಡೇಟಿಂಗ್ ಸಾಮಾನ್ಯ ಸಂಗತಿ. ಮದುವೆಯ ಗೊಡವೆ ಇಲ್ಲದೆ ತಮಗಿಷ್ಟ ಆದವರ ಜೊತೆ ಬದುಕು ನಡೆಸುವುದು ಸಾಮಾನ್ಯ ಸಂಗತಿ. ಡೇಟಿಂಗ್ ಸಂಸ್ಕೃತಿ  ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ ನಲ್ಲಿ ಹೆಚ್ಚು ಕಂಡು ಬರುತ್ತಿರುತ್ತದೆ. ಆದರೆ ಟಾಲಿವುಡ್ , ಸ್ಯಾಂಡಲ್‌ವುಡ್ ನಂತಹ ವುಡ್ ಗಳಲ್ಲಿ ಅದರ ಪ್ರಭಾವ ಇಲ್ಲ. 

 
ವಿಶೇಷ ಅಂದ್ರೆ ದಕ್ಷಿಣ ಭಾರತದ ಒಬ್ಬ ನಟ ಅನೇಕ  ಮಂದಿ ಜೊತೆ ಡೇಟಿಂಗ್ ಮಾಡಿರುವ ಸುದ್ದಿ ಇದೆ. ಆತ ಬೇರೆ ಯಾರು ಅಲ್ಲ ರಾಣ ದಗ್ಗುಬಾಟಿ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ಗಳಲ್ಲಿ ತನಗೊಂದು ಸ್ಥಾನ ಪಡೆದಿರುವ ರಾಣ ಅವರನ್ನು ಮೋಸ್ಟ್ ಡಿಜೈರಬಲ್ ಮ್ಯಾನ್ ಎಂದು ಆಯ್ಕೆ ಮಾಡಿದೆ ಆಂಗ್ಲ ಪತ್ರಿಕೆಯೊಂದು.
 
ಈ ಆಜಾನುಬಾಹು ಹೀರೋ ಬಳಿ ಡೇಟಿಂಗ್ ವಿಷಯ ಪ್ರಸ್ತಾಪ ಮಾಡಿದಾಗ ಆತ ತಾನು ಬರೋಬ್ಬರಿ 30ಮಂದಿ ಜೊತೆ ಡೇಟಿಂಗ್ ಮಾಡಿದ್ದೇನೆ ಎಂದು ಹೇಳಿ ಮಾಧ್ಯಮಗಳೇ ಗಲಿಬಿಲಿ ಆಗುವಂತೆ ಮಾಡಿದ್ದಾರೆ. ಆದರೆ ತಕ್ಷಣ ನಗುತ್ತ, ಇದನ್ನು ಸತ್ಯ ಎಂದು ತಿಳಿಯ ಬೇಡಿ, ನನ್ನ ಬಗ್ಗೆ ಹರಡಿರುವ ವದಂತಿ ಬಗ್ಗೆ ಹೇಳಿದ್ದೇನೆ ಎಂದಿದ್ದಾರೆ. ಒಟ್ಟಾರೆ ರಾಣ ಹೇಗೋ ಸದಾ ಸುದ್ದಿಯಲ್ಲಿರುತ್ತಾರೆ. 

Share this Story:

Follow Webdunia kannada