Select Your Language

Notifications

webdunia
webdunia
webdunia
webdunia

ಹೊಸ ಲುಕ್ಕಿಗೆಂದು ಮುಂಬೈ ಫಿಸಿಕಲ್ ಟ್ರೈನರ್ ಮೊರಹೊಕ್ಕ ರಾಮ್ ಚರಣ್

ಹೊಸ ಲುಕ್ಕಿಗೆಂದು  ಮುಂಬೈ ಫಿಸಿಕಲ್ ಟ್ರೈನರ್ ಮೊರಹೊಕ್ಕ ರಾಮ್ ಚರಣ್
, ಸೋಮವಾರ, 21 ಜುಲೈ 2014 (11:24 IST)
ರಾಮ್ ಚರಣ್ ಗೋವಿಂದುಡು ಅಂದರಿವಾಡಿಲೋ ಚಿತ್ರದಲ್ಲಿ ನಟಿಸುತ್ತಾ ಇದ್ದಾರೆ. ಆ ಚಿತ್ರದ ಕೆಲಸಗಳು ಇನ್ನು ಪೂರ್ಣ ಆಗಿಯೇ ಇಲ್ಲ, ಆಗಲೇ ಅವರು ಶ್ರೀನು ವೈಟ್ಲ ನಿರ್ದೇಶನ ಮತ್ತೊಂದು ಚಿತ್ರದಲ್ಲಿ  ನಟಿಸಲು ಸಿದ್ಧತೆ ನಡೆಸಿದ್ದಾರೆ.

ಈ ಚಿತ್ರದಲ್ಲಿ ಅವರು ಹೃತಿಕ್  ರೋಶನ್ ಅವರು ಬ್ಯಾಂಗ್  ಬ್ಯಾಂಗ್  ಚಿತ್ರದಲ್ಲಿ ತೋರಿದಂತೆ  ಭಿನ್ನ ರೀತಿಯ ಫಿಸಿಕ್ ತೋರುವುದಕ್ಕೆ ಆದ್ಯತೆ ನೀಡಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ಅವರ ಸೆಲೆಬ್ರಿಟಿ ಫಿಸಿಕಲ್ ಟ್ರೈನರ್ ಸಮೀರ್ ಜುರಾ ಅವರನ್ನು ತಮ್ಮ ಪರ್ಸನಲ್ ಫಿಸಿಕಲ್ ಟ್ರೈನರ್ ಆಗಿ ಮಾಡಿಕೊಳ್ಳುತ್ತಿದ್ದಾರೆ.

ಮೇರಿಕೊಂ ಚಿತ್ರದಲ್ಲಿ ಪ್ರಿಯಾಂಕ ಚೋಪ್ರ ಅವರು ಬದಲಾದ ರೀತಿ ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ. ಅದಕ್ಕೆ ಮುಖ್ಯ ಕಾರಣ ಸಮೀರ್. ಅವರು ನೀಡಿದ ಟಿಪ್ಸ್, ಟ್ರೇನಿಂಗ ಅನುಸರಿಸಿ ಆಕೆ ತನ್ನ ದೈಹಿಕ ರೂಪವನ್ನು ಬದಲಾಯಿಸಿಕೊಂಡಿದ್ದಾಳೆ. ಈಗ ಈ ಅಂತಹ ಬದಲಾವಣೆಯನ್ನು ಬಯಸಿ ಚೆರ್ರಿ ಸಮೀರ್ ಕಡೆ ತಮ್ಮ ಗಮನ ನೆಟ್ಟಿದ್ದಾರೆ. 

webdunia
ಇತ್ತೀಚಿಗೆ ಹೈದರಾಬಾದ್ ಗೆ ಬಂದಿದ್ದ ಸಮೀರ್ ತಮ್ಮ ಹೊಸ  ಶಿಷ್ಯ ರಾಮ್ ಚರಣ್ ಗೆ ಫಿಸಿಕಲ್ ಫಿಟ್ ನೆಸ್ಗೆ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡಿದರಂತೆ. ಎರಡು ತಿಂಗಳುಗಳ ಕಾಲ ಕಷ್ಟಪಟ್ಟರೆ ಚರಣ್ ಬಯಸಿದಂತಹ ರೂಪ ಪಡೆಯ ಬಹುದು ಎಂದಿದ್ದಾರಂತೆ ಸಮೀರ್. ಈಗ ಇಂತಹವರಿಗಾಗಿ ಕಷ್ಟಪಟ್ಟರೆ ಫಿಸಿಕ್ ಉಂಟು ಅಂತ ಹೊಸ ಗಾದೆ ಸೃಷ್ಟಿ ಮಾಡ ಬಹುದು . ಗೋವಿಂದುಡು ಅಂದರಿವಾಡಿಲೋ ಚಿತ್ರದ  ನಂತರ ಸಮೀರ್ ಬಳಿ ಶಿಷ್ಯರಾಗುವ ಸಾಧ್ಯತೆ ಇದೆ ಎಂದಿದ್ದಾರೆ ಅವರ ಆಪ್ತ ವಲಯ..! ಎಲ್ಲಾ ಗೆಲುವಿಗಾಗಿ!

Share this Story:

Follow Webdunia kannada