ರಜನೀಕಾಂತ್ ಅಭಿನಯದ ಎಂಥಿರನ್ 2 ಫಸ್ಟ್ ಲುಕ್ ರಿಲೀಸ್

Webdunia
ಸೋಮವಾರ, 21 ನವೆಂಬರ್ 2016 (09:17 IST)
ಮುಂಬೈ: ರಜನೀಕಾಂತ್ ಚಿತ್ರವೆಂದರೆ ಅಭಿಮಾನಿಗಳು ಎಷ್ಟು ದಿನ ಬೇಕಾದರೂ ಕಾಯುತ್ತಾರೆ. ಆದರೆ ರಜನಿ ಈಗೀಗ ಅಭಿಮಾನಿಗಳನ್ನು ಹೆಚ್ಚು ಕಾಯಿಸುತ್ತಿಲ್ಲ. ಕಬಾಲಿ ಚಿತ್ರ ಬಿಡುಗಡೆಯಾದ ಕೆಲವೇ ದಿನಕ್ಕೆ ಅವರ ಮತ್ತೊಂದು ಚಿತ್ರ ರೆಡಿಯಾಗುತ್ತಿದೆ. ಎಂಥಿರಾನ್ ಚಿತ್ರದ ಎರಡನೇ ಭಾಗ ಫಸ್ಟ್ ಲುಕ್  ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಯಾಗಿದೆ.

ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ರಜನೀಕಾಂತ್, ಅಕ್ಷಯ್ ಕುಮಾರ್, ಆಮಿ ಜಾಕ್ಸನ್, ನಿರ್ದೇಶಕ ಶಂಕರ್, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸೇರಿದಂತೆ ಸಿನಿ ದಿಗ್ಗಜರು ಭಾಗವಹಿಸಿದ್ದರು. ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ನಿರೂಪಣೆ ಮಾಡಿದ್ದು ವಿಶೇಷ.

ಎಂಥಿರಾನ್ ಎರಡನೇ ಭಾಗ 2.0 ಚಿತ್ರದ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಭಾರತೀಯ ಸಿನಿಮಾದಲ್ಲೇ ಇತಿಹಾಸ ನಿರ್ಮಿಸಲಿದೆ. 350 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಆಧುನಿಕ ತಂತ್ರಜ್ಞಾನ ಬಳಸಲಾಗಿದೆ. ಹಿಂದಿನ ಎಂಥಿರಾನ್ ಚಿತ್ರದಲ್ಲಿಯೂ ತಂತ್ರಜ್ಞಾನವೇ ಮುಖ್ಯ ಪಾತ್ರ ವಹಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಂದಮೂರಿ ಬಾಲಕೃಷ್ಣ ಅಖಂಡ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ

ಲಡಾಖಿ ಮದುವೆಯಲ್ಲಿ ಕಂಗನಾ ಸಾಂಪ್ರದಾಯಿ ಲುಕ್‌ಗೆ ಫಿದಾ

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಮುಂದಿನ ಸುದ್ದಿ
Show comments