Webdunia - Bharat's app for daily news and videos

Install App

ರಜನಿಕಾಂತ್ ನನ್ನ ತಂದೆ, ಸ್ನೇಹಿತ: ಹೃತಿಕ್ ರೋಷನ್

Webdunia
ಬುಧವಾರ, 25 ಜನವರಿ 2017 (10:59 IST)
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನನಗೆ ತಂದೆ ಸಮಾನ ಎಂದು ಬಾಲಿವುಡ್ ನಟ ಹೃತಿಕ್ ರೋಷನ್ ಹೇಳಿದ್ದಾರೆ. ರಜನಿಕಾಂತ್ 1986ರಲ್ಲಿ ಅಭಿನಯಿಸಿರುವ ಭಗವಾನ್ ದಾದಾ ಎಂಬ ಚಿತ್ರದಲ್ಲಿ ಹೃತಿಕ್ ಬಾಲ ಕಲಾವಿದನಾಗಿ ಕಾಣಿಸಿಕೊಂಡಿದ್ದರು. 
 
ಅಂದಿನಿಂದ ಇಂದಿನವರೆಗೂ ರಜನಿಯನ್ನು ಭೇಟಿಯಾಗಿದ್ದಾಗಲಿ, ಮಾತನಾಡಿದ್ದಾಗಲಿ ಇಲ್ಲ. ಆದರೆ ಇತ್ತೀಚೆಗೆ ಹೃತಿಕ್ ಅಭಿನಯಿಸಿರುವ ಕಾಬಿಲ್ ಚಿತ್ರದ ಟ್ರೇಲರ್ ನೋಡಿ ಚೆನ್ನಾಗಿ ಎಂದು ಹೃತಿಕ್‌ಗೆ ರಜನಿ ಪತ್ರ ಬರೆದಿದ್ದಾರಂತೆ. ಸ್ವತಃ ರಜನಿ ಅವರೇ ಪತ್ರ ಬರೆದಿರುವುದು ಹೃತಿಕ್‌ಗೆ ಅತೀವ ಸಂತಸ ತಂದಿದೆಯಂತೆ.
 
ರಜನಿ ಹುಟ್ಟುಹಬ್ಬಕ್ಕೂ ಒಂದು ದಿನ ಮುಂಚೆ ಶುಭಾಶಯ ತಿಳಿಸಲು ಹೃತಿಕ್ ತಂದೆ ರಾಕೇಶ್ ರೋಷನ್ ಕರೆ ಮಾಡಿದರಂತೆ. ಆಗ ರಜನಿ ಮಾತನಾಡುತ್ತಾ, ಕಾಬಿಲ್ ಚಿತ್ರ ನೋಡಬೇಕೆಂದು ಎದುರುನೋಡುತ್ತಿದ್ದೇನೆ ಎಂದರಂತೆ. ಇದಕ್ಕಾಗಿ ಕಾಬಿಲ್ ಪ್ರೀಮಿಯರ್ ಶೋ ರಜನಿಕಾಂತ್‌ಗೆ ತೋರಿಸಲಿದ್ದಾರೆ. 
 
ಭಗವಾನ್ ದಾದಾ ಚಿತ್ರೀಕರಣ ವೇಳೆ ಹೃತಿಕ್ ಅಭಿನಯದ ಬಹಳಷ್ಟು ಸನ್ನಿವೇಶಗಳನ್ನು ರಿಪೀಟ್ ಮಾಡಬೇಕಾಗಿತ್ತಂತೆ. ಆಗ ತಪ್ಪು ಹೃತಿಕ್‌ದಲ್ಲ ನನ್ನದೇ ಎಂದು ರಜನಿ ಹೇಳುತ್ತಿದ್ದರಂತೆ. ಆಗಲೇ ನನಗೆ ರಜನಿ ತಂದೆಯಂತೆ, ಸ್ನೇಹಿತನಂತೆ ಕಂಡರು. ದೊಡ್ಡವರಿಂದ ಚಿಕ್ಕವರವರೆಗೂ ಎಲ್ಲರಿಗೂ ಗೌರವ ಕೊಡುತ್ತಿದ್ದರು ಎಂದು ರಜನಿ ಜತೆಗಿನ ತನ್ನ ಅನುಬಂಧವನ್ನು ನೆನಪಿಸಿಕೊಂಡಿದ್ದಾರೆ ಹೃತಿಕ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ಮುಂದಿನ ಸುದ್ದಿ
Show comments