Select Your Language

Notifications

webdunia
webdunia
webdunia
webdunia

ಸಾಲದ ಸುಳಿಯಲ್ಲಿ ರಜನಿ ಕಾಂತ್? ಆಸ್ತಿ ಮಾರಾಟದತ್ತ ಸೂಪರ್ ಸ್ಟಾರ್ ?

ಸಾಲದ ಸುಳಿಯಲ್ಲಿ ರಜನಿ ಕಾಂತ್? ಆಸ್ತಿ ಮಾರಾಟದತ್ತ ಸೂಪರ್ ಸ್ಟಾರ್ ?
, ಶನಿವಾರ, 22 ನವೆಂಬರ್ 2014 (10:19 IST)
ಈಗ ಬಿಡುಗಡೆ ಆಗುತ್ತಿರುವ ಲಿಂಗಾ ಚಿತ್ರದಲ್ಲಿ ನಟಿಸಲು ಸೂಪರ್ ಸ್ಟಾರ್ ರಜನಿ ಕಾಂತ್ ಅವರು ಪಡೆದ ಸಂಭಾವನೆ  ಬರೋಬ್ಬರಿ 35  ಕೋಟಿ ರೂಪಾಯಿಗಳು. ಆದರೂ ಸಹಿತ ಅವರು ಈಗ ತಮ್ಮ ಸಾಲ ತೀರಿಸಲು ಆಸ್ತಿ ಒಂದನ್ನು ಮಾರುತ್ತಿದ್ದಾರೆ ಎನ್ನುವ ಸಂಗತಿ ಎಲ್ಲರ ಗಮನ ಸೆಳೆದಿದೆ. 

ಅದರ ಹಿಂದೆ ಒಂದು ಮುಖ್ಯ ಸಂಗತಿ ಇದೆ. ನಟ ರಜನಿ ಅವರ ಮಗಳು ಸೌಂದರ್ಯ ಮಾಡಿದ ಸಾಹಸ ಅಂದ್ರೆ ಕೊಚ್ಚಾಡಿಯನ್ ನಿರ್ದೇಶನ. ಆದರೆ ಅದು ಕೆಟ್ಟದಾಗಿ ಸೋತು ರಜನಿ ಅವರನ್ನು ಸಾಲದ ಸಿಕ್ಕಿನಲ್ಲಿ ಸಿಲುಕುವಂತೆ ಮಾಡಿತು. ಈಗ ರಜನಿ ಅವರು ಒಬ್ಬರಿಗೆ  ಎಂಟು  ಕೋಟಿಗಳಷ್ಟು ಸಾಲ ತೀರಿಸ ಬೇಕಾಗಿದೆ.
 
ಅದರ ಭಾಗವಾಗಿ ಅವರು   ಹೈದರಾಬಾದ್  ಭಾಗ್ಯನಗರ್ ನಲ್ಲಿ ಇರುವ ಪ್ರತಿಷ್ಟಿತ  ಬಂಗಲೆಯನ್ನು ಮಾರಿ ಬಿಡುತ್ತಿದ್ದಾರೆ. ಈ ಮುಖಾಂತರ ಮಗಳ ಸಾಲವನ್ನು ಅಪ್ಪ ತೀರಿಸಲು ಸಿದ್ಧ ಆಗಿದ್ದಾರೆ. ಕೊಚ್ಚಾಡಿಯನ್ ಬಹು ನಿರೀಕ್ಷೆಯ ಚಿತ್ರವಾಗಿ ಸುದ್ದಿ ಮಾಡಿತ್ತು. ಆದರೆ ಆ ಚಿತ್ರಕ್ಕೆ ಬಳಸಲಾದ ಮೊತ್ತ ದೊರಕದೆ ರಜನಿಕಾಂತ್ ಅವರು ಸಾಲದ ಸುಳಿಯಲ್ಲಿ ಸಿಲುಕಬೇಕಾಯ್ತು ಎನ್ನುವ ಸುದ್ದಿ ಇದೆ. 
 
ಚಿತ್ರಕ್ಕೆಂದು  ಸಿನಿಮಾ ಫೈನಾನ್ಸಿಯರ್ ಬಳಿ ಪಡೆದ ಸಾಲ ತೀರಿಸಲು ರಜನಿ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಹೀಗಂತ ಸುದ್ದಿ ಹರಡುತ್ತಿದ್ದಾರೆ ಜನ. ವಾಸ್ತವಾಂಶ ಏನು ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಇನ್ನು ಕೆಲವು ಸುದ್ದಿ ಪ್ರಕಾರ ಗುಂಟೂರು ಈಗ ಆಂಧ್ರ ಪ್ರದೇಶದ ರಾಜಧಾನಿ ಆಗಲಿದ್ದು. ಅಲ್ಲಿ ಒಂದಷ್ಟು ಜಾಗ ಕೊಳ್ಳಲು ಇಲ್ಲಿರುವ ಆಸ್ತಿ ಮಾರುತ್ತಿದ್ದಾರಂತೆ. ಒಟ್ಟಾರೆ ಭಾರಿ ಪ್ರಮಾಣದಲ್ಲಿ ಖರ್ಚುಮಾಡಿ ನಿರ್ಮಿಸಿದ ಚಿತ್ರ ಸೋತು ಮಕಾಡೆ ಮಲಗಿದರೆ ಆಗುವ ತೊಂದರೆ ಎಂತಹದ್ದು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. 

Share this Story:

Follow Webdunia kannada