Webdunia - Bharat's app for daily news and videos

Install App

ನನ್ನನ್ನು ಅರೇಬಿಯಾದ ಕುದುರೆ ಎನ್ನುತ್ತಿದ್ದಾರೆ: ರೈ ಲಕ್ಷ್ಮಿ

Webdunia
ಶನಿವಾರ, 18 ಫೆಬ್ರವರಿ 2017 (12:47 IST)
ಬೆಳಗಾವಿ ಬಾಲೆ ರೈ ಲಕ್ಷ್ಮಿ ಈಗ ಪರಭಾಷೆಯಲ್ಲಿ ಐಟಂ ಗರ್ಲ್ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಖೈದಿ ನಂಬರ್ 150 ಚಿತ್ರದಲ್ಲಿ ಸೊಂಟ ಬಳುಕಿಸಿದ್ದರು ರೈ ಲಕ್ಷ್ಮಿ. ಆ ಹಾಡಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೆಲವೊಂದು ವಿವರಗಳನ್ನು ಬಹಿರಂಗಪಡಿಸಿದ್ದಾರೆ.
 
ಜೂಲಿ 2 ಚಿತ್ರೀಕರಣದಲ್ಲಿದ್ದಾಗ ನನಗೊಂದು ಫೋನ್ ಕರೆ ಬಂತು, ಚಿರಂಜೀವಿ ಜೊತೆ ಹಾಡೊಂದರಲ್ಲಿ ನರ್ತಿಸುತ್ತೀರಾ? ಎಂದು ಕೇಳಿದರು. ಬೇರೆ ಆಲೋಚನೆ ಮಾಡಲೆ ಕೂಡಲೆ ಒಪ್ಪಿಕೊಂಡೆ. ಡಾನ್ಸ್‌ನಲ್ಲಿ ಚಿರಂಜೀವಿ ಏನು ಎಂಬುದು ಎಲ್ಲರಿಗೂ ಗೊತ್ತು. ಇದೇ ನನ್ನನ್ನು ತುಂಬಾ ಟೆನ್ಷನ್‌ಗೆ ಗುರಿಪಡಿಸಿದ ಸಂಗತಿ ಎಂದಿದ್ದಾರೆ ಲಕ್ಷ್ಮಿ ರೈ.
 
ಮೆಗಾಸ್ಟಾರ್ ಚಿರಂಜೀವಿ ಜತೆಗೆ ಅಭಿನಯ ಎಂದರೆ ಯಾವುದೇ ಹೀರೋಯಿನ್ ಕನಸು ನನಸಾದಂತೆ. ಥಿಯೇಟರ್‌ನಲ್ಲಿ ಹಾಡಿಗೆ ಎಷ್ಟೆಲ್ಲಾ ರಿಯಾಕ್ಷನ್ ಬಂತೋ ಗೊತ್ತೇ ಇದೆ. ಒಂದೇ ಒಂದು ಹಾಡಿನ ಮೂಲಕ ಇಷ್ಟೆಲ್ಲಾ ಪ್ರಚಾರ ಸಿಗುತ್ತದೆ ಎಂದರೆ ಅಚ್ಚರಿಯಾಗುತ್ತದೆ. 
 
ಹಿಂದಿಯಲ್ಲಿ ತಾನು ಅಭಿನಯಿಸಿದ ಅಕಿರಾ ಮೊದಲು ರಿಲೀಸ್ ಆದರೂ.. ನನ್ನ ಮೊದಲ ಚಿತ್ರ ಜೂಲಿ 2. ಯಾಕೆಂದರೆ ಮೊದಲು ಸಹಿಹಾಕಿದ ಚಿತ್ರ ಇದು. ನನ್ನ ಫಿಜಿಕ್‌ಗೆ ಯಾವುದೇ ಡ್ರೆಸ್ ಆದರೂ ಅಷ್ಟೇ ಹಾಗೆಯೇ ಸೂಟ್ ಆಗುತ್ತದೆ. ಜೂಲಿ 2 ಬಿಡುಗಡೆಯಾದ ಮೇಲೆ ನಾನೇ ಟಾಕ್ ಆಫ್ ಟೌನ್ ಆಗುತ್ತೇನೆ ಎಂದಿದ್ದಾರೆ ರೈ ಲಕ್ಷ್ಮಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ಮುಂದಿನ ಸುದ್ದಿ
Show comments