Select Your Language

Notifications

webdunia
webdunia
webdunia
webdunia

ಪರ್ಪಲ್ ರೈನ್ ಗಾಯಕ ಪ್ರಿನ್ಸ್ ನಿಧನ

ಪರ್ಪಲ್ ರೈನ್ ಗಾಯಕ ಪ್ರಿನ್ಸ್ ನಿಧನ
ಕೆನಡಾ , ಶುಕ್ರವಾರ, 22 ಏಪ್ರಿಲ್ 2016 (11:03 IST)
ವಿಶ್ವದ ಸಂಗೀತ ಪ್ರೇಮಿಗಳಿಗೆ ಇವತ್ತು ದುಃಖದ ದಿನ.. ಕೆನಡಾದ ಪ್ರಸಿದ್ಧ ಗಾಯಕ ಪ್ರಿನ್ಸ್ ವಿಧಿವಶರಾಗಿದ್ದಾರೆ. 57 ವರ್ಷದ ಗಾಯಕ ಪ್ರಿನ್ಸ್ ತೀವ್ರ ಜ್ವರದಿಂದ ಬಳಲುತ್ತಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಮೂಲಗಳಿಂದ ತಿಳಿದು ಬಂದಿದೆ. 
ಕೆನಡಾ ಎಸ್ಟೇಟ್‌ನಲ್ಲಿ ಅವರು ವಿಧಿವಶರಾಗಿದ್ದಾರೆ,. ಪ್ರಿನ್ಸ್ ಗ್ಲೋಬಲ್ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಕೆಲ ಮೂಲಗಳ ಪ್ರಕಾರ ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಆದರೆ ಮರಣೋತ್ತರ ಪರೀಕ್ಷೆ ಬಳಿಕವೇ ನಿಖರ ಮಾಹಿತಿ ಗೊತ್ತಾಗಲಿದೆ.
 
ಪರ್ಪಲ್ ಸಾಂಗ್ ಮೂಲಕ ಮಿಲಿಯನ್ ಜನರ ಮನಗೆದಿದ್ದ ಪ್ರಿನ್ಸ್, ಹಲವು ಟೈಟಲ್ ಸಾಂಗ್ ಮೂಲಕ ಎಲ್ಲರ ಮನಗೆದಿದ್ದರು. ಇದ್ದರಿಂದ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. 7 ಬಾರಿ ಗ್ರ್ಯಾಮಿ ಅವಾರ್ಡ್ ಕೂಡ ಅವರಿಗೆ ಲಭಿಸಿದ್ದವು.
 
 

Share this Story:

Follow Webdunia kannada