Select Your Language

Notifications

webdunia
webdunia
webdunia
webdunia

ನೆನಗುದಿಯಲ್ಲಿರುವ ಪ್ರಿಯಾಂಕ ಚೋಪ್ರ ಡ್ರೀಮ್ ಪ್ರಾಜಕ್ಟ್ ಮೇಡಂಜೀ

ನೆನಗುದಿಯಲ್ಲಿರುವ ಪ್ರಿಯಾಂಕ ಚೋಪ್ರ ಡ್ರೀಮ್ ಪ್ರಾಜಕ್ಟ್ ಮೇಡಂಜೀ
, ಶುಕ್ರವಾರ, 17 ಏಪ್ರಿಲ್ 2015 (11:02 IST)
ಪ್ರಿಯಾಂಕ ಚೋಪ್ರ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಆಕೆ ಬಾಲಿವುಡ್‌ನಲ್ಲಿ ಹೇಳಿಕೊಳ್ಳುವಷ್ಟು ಅವಕಾಶಗಳನ್ನು  ಪಡೆಯದೇ ಹೋದರು ಸಹಿತ ವಿದೇಶದಲ್ಲಿ ಒಳ್ಳೆಯ ಅವಕಾಶ ಪಡೆದುಕೊಂಡಿದ್ದಾಳೆ. ಅಮೆರಿಕದ ಟೀವಿ ಷೋ ಒಂದರಲ್ಲಿ ಆಕೆ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಆಕೆಯು ಮೇರಿ ಕೊಂ ಚಿತ್ರದಲ್ಲಿ ನಟಿಸಿದ ಬಳಿಕ ನಚ್ ಬಲಿಯೇ ಎನ್ನುವ  ರಿಯಾಲಿಟಿ ಷೋ ತೀರ್ಪುಗಾರ್ತಿ ಆಗುತ್ತಾಳೆ ಎನ್ನುವ ಸುದ್ದಿ ಹರಡಿತ್ತಾದರೂ ಈಗ ಅಲ್ಲಿ ತೀರ್ಪುಗಾರ್ತಿಯಾಗಿ ಬರುವುದು ಪ್ರಿಯಾಂಕ ಅಲ್ಲ ಪ್ರೀತಿ ಜಿಂಟ ಎನ್ನುವುದು ತಿಳಿದು ಬಂದಿದೆ. ನೆಸ್ ವಾಡಿಯಾ ಜೊತೆ ಜಗಳ ಆಡಿ ಸಾಕಾಗಿರುವ ಹಾಗೂ ಬಾಲಿವುಡ್ ನಲ್ಲಿ ಯಾವುದೇ ರೀತಿಯ ಅವಕಾಶ ಇಲ್ಲದೆ ಹೈರಾಣಾಗಿರುವ ಪ್ರೀತಿಗೆ ಈ ಕಾರ್ಯಕ್ರಮ ಜೀವದಾನ ಮಾಡ ಬಹುದು. 

ಆದರೆ ಈಗ ನಾವು ಹೇಳ ಹೊರಟಿರುವ ವಿಷಯ ಏನೆಂದರೆ ಪ್ರಿಯಾಂಕ ಚೋಪ್ರ ನಟನೆ ಹಾಗೂ ನಿರ್ಮಾಣದ ಮೇಡಂಜೀ ಕಥೆ ಏನಾಯ್ತು ಎನ್ನುವುದರ ಬಗ್ಗೆ. ನಿಮಗೆ ಬಹಳ ಹಿಂದೆಯೇ ಪ್ರಿಯಾಂಕ ಮೇಡಂಜೀ ಎನ್ನುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದೆವು.ಅದು ತನ್ನ ಡ್ರೀಮ್ ಪ್ರಾಜೆಕ್ಟ್ ಎಂದು ಹೇಳುತ್ತಿದ್ದರೂ ಸಹಿತ ಆ ಕನಸು ಸದ್ಯಕ್ಕೆ ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಏಕೆಂದರೆ ಈಗ ಪಿಗ್ಗಿ ಅಮೇರಿಕಾದ ಟೆಲಿವಿಷನ್ ಷೋ ಕ್ವಾಂಟಿಕೊದಲ್ಲಿ ತುಂಬಾ ಬ್ಯುಸಿಯಾಗಿದ್ದಾಳೆ. ಆಕೆಗೆ ತನ್ನ ಕನಸಿನ ಚಿತ್ರವಾದ ಮೇಡಂಜೀಯನ್ನು ತೆರೆ ಕಾಣಿಸುವಷ್ಟು ವೇಳೆ ಇಲ್ಲ. ಸಮಯದ ಅಭಾವದಿಂದ ಆಕೆ ತನ್ನ ಕನಸನ್ನು ಪಕ್ಕಕ್ಕಿಟ್ಟು ದುಡ್ಡು ಮಾಡಿಕೊಳ್ಳುವುದರತ್ತ ಗಮನ ಹರಿಸಿದ್ದಾಳೆ. ಈ ಚಿತ್ರವನ್ನು ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ನಿರ್ದೇಶನ ಮಾಡುವ ಹೊಣೆ ಹೊತ್ತಿದ್ದರು.  

Share this Story:

Follow Webdunia kannada