Webdunia - Bharat's app for daily news and videos

Install App

ಚಿತ್ರರಂಗದಿಂದ ದೂರ ಉಳಿಯುತ್ತಾರಾ ಖ್ಯಾತ ತಾರೆ ಪ್ರಿಯಾಂಕಾ ಛೋಪ್ರಾ?

Webdunia
ಬುಧವಾರ, 31 ಆಗಸ್ಟ್ 2016 (13:29 IST)
ಖ್ಯಾತ ತಾರೆ ಪ್ರಿಯಾಂಕಾ ಛೋಪ್ರಾ ಸಿನಿಮಾ ವೃತ್ತಿಗೆ ಬ್ರೇಕ್ ತೆಗೆದುಕೊಳ್ತಾರಾ? ಅಥವಾ ಬಾಲಿವುಡ್ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್‌ನಲ್ಲಿ ಪ್ರಿಯಾಂಕಾ ಛೋಪ್ರಾ ಘೋಷಣೆಯೊಂದನ್ನ ಮಾಡಲಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳಿಗೆ ಅಚ್ಚರಿ ಆಗಬಹುದು.


ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಖ್ಯಾತಿ ಗಳಿಸುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಿಂದ ದೂರ ಉಳಿಯಲಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಡಿಸೆಂಬರ್‌ನಲ್ಲಿ ತಮ್ಮ ವೃತ್ತಿ ಜೀವನದ ಕುರಿತು ಬಹಿರಂಗ ಪಡಿಸಲಿದ್ದಾರಂತೆ.
 
ಪ್ರಿಯಾಂಕಾ ಅಭಿನಯಿಸುತ್ತಿರುವ ಹಾಲಿವುಡ್ ಚಿತ್ರ ಅಲ್ಲದೇ ಅಮೇರಿಕಾದ ಟೆಲಿವಿಜನ್ ಶೋನಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಇದಕ್ಕಾಗಿ ಅವರು ತುಂಬಾ ಉತ್ಸುಕದಲ್ಲಿದ್ದಾರಂತೆ. ಕೆಲ ಮೂಲಗಳ ಪ್ರಿಯಾಂಕಾ ಡಿಸೆಂಬರ್‌ನಲ್ಲಿ ಅಮೇರಿಕಾದಲ್ಲೇ ಸೆಟ್ಲ್ ಆಗೋ ಪ್ಲ್ಯಾನ್ ನಲ್ಲಿದ್ದಾರೆ.

ಕ್ವಾಂಟಿಕೋ 2ಗೆ ಹೆಚ್ಚಿನ ರೆಸ್ಪಾನ್ಸ್ ಸಿಕ್ರೆ ಪ್ರಿಯಾಂಕಾ ಐದು ವರ್ಷಗಳ ಕಾಲ ಅಲ್ಲಿಯೇ ವಾಸಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಅಮೇರಿಕಾದಲ್ಲಿ ಅಪಾರ್ಟ್ಮೆಂಟ್ ಕೂಡ ಖರೀದಿ ಮಾಡಿದ್ದಾರೆ.  ಇತ್ತ ಕಡೆ 'ಬೇವಾಚ್' ಚಿತ್ರದ ಬಳಿಕ ಹಾಲಿವುಡ್ ಚಿತ್ರದಲ್ಲಿ ನಟಿಸುವಂತೆ ಪಿಗ್ಗಿಗೆ ಆಫರ್‌ಗಳು ಬರುತ್ತಿವೆ. ಆದ್ದರಿಂದ ಬಾಲಿವುಡ್‌ ಚಿತ್ರರಂಗ  ಬೀಡುವ ಮನಸ್ಸು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
 
ಕೆಲ ಮೂಲಗಳ ಪ್ರಕಾರ ಇದುವರೆಗೂ ಬಾಲಿವುಡ್ ಚಿತ್ರರಂಗದಿಂದ ದೂರ ಉಳಿಯುವ ಬಗ್ಗೆ ಪ್ರಿಯಾಂಕಾ ಛೋಪ್ರಾ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗುತ್ತಿದೆ. ಈ ಕುರಿತು ಪ್ರಿಯಾಂಕಾ ಏನು ಹೇಳ್ತಾರೆ ಎನ್ನುವುದನ್ನು ಕಾದು ನೋಡ್ಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮೋಹನ್ ಲಾಲ್ ಮಗಳು ಬೆಳ್ಳಿತೆರೆಗೆ ಪಾದಾರ್ಪಣೆ

ಟಾಪ್ ಮ್ಯೂಸಿಕ್ ಕೆಟಗರಿಯಲ್ಲಿ ಸ್ಥಾನ ಪಡೆದ ಬ್ಯಾಂಗಲ್ ಬಂಗಾರಿ, ಯುವ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ

ಗೌತಮ್ ಹೆಂಡ್ತಿ ಭೂಮಿಕಾ ಡೆಲಿವರಿ ಮಾಡಿಸೋದು ಇದೇ ಡಾಕ್ಟರ್ ಅಂತಿದ್ದಾರೆ ವೀಕ್ಷಕರು

ಯಾವುದೇ ಕಾರಣಕ್ಕೂ ಆ ಒಂದು ದೃಶ್ಯದಲ್ಲಿ ನಟಿಸಲ್ಲ ಎಂದ ರಶ್ಮಿಕಾ ಮಂದಣ್ಣ

ಕಿಚ್ಚ ಸುದೀಪ್ ಬಿಗ್ ಬಾಸ್ ಬಿಡೋದು, ಧೋನಿ ಸಿಎಸ್ ಕೆ ಬಿಡೋದು ಎರಡೂ ಒಂದೇ

ಮುಂದಿನ ಸುದ್ದಿ
Show comments