Select Your Language

Notifications

webdunia
webdunia
webdunia
webdunia

ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಪ್ರಿಯಾಂಕ ಚೋಪ್ರ

ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಪ್ರಿಯಾಂಕ ಚೋಪ್ರ
, ಶನಿವಾರ, 27 ಡಿಸೆಂಬರ್ 2014 (10:20 IST)
ಒಂದೇ ರೀತಿಯ ಪಾತ್ರಗಳತ್ತ  ಆದ್ಯತೆ ನೀಡದ ನಟಿಯರಲ್ಲಿ ಪ್ರಿಯಾಂಕ ಚೋಪ್ರ ಸಹಿತ ಸೇರ್ಪಡೆ ಆಗಿದ್ದಾಳೆ. ಆಕೆಯು ಇತ್ತಿಚೆಗೆ ಮೇರಿ ಕೊಮ್ ಎನ್ನುವ ಚಿತ್ರದಲ್ಲಿ ಡಿ ಗ್ಲಾಮರ್ ಆಗಿ ನಟಿಸಿ ತನ್ನ  ಅಭಿನಯದ  ಮೂಲಕ ಎಲ್ಲರ ಗಮನ ಸೆಳೆದಿದ್ದಳು. ಈಗ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾಳೆ.

ಮೇರಿ ಕೊಮ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಒಮಾಂಗ್ ಕುಮಾರ್ ಇದನ್ನು ನಿರ್ದೇಶಿಸುತ್ತಿದ್ದು, ಇದು ಎರಡನೇ ಮಹಾ ಯುದ್ಧದ ಸಮಯದಲ್ಲಿ ನಡೆದ ಕಥೆಯನ್ನು ಆಧರಿಸಿದೆಯಂತೆ. ಈಗ ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎನ್ನುವ  ಮಾಹಿತಿ ಬಾಲಿವುಡ್ ನಲ್ಲಿ ಓಡಾಡುತ್ತಿದೆ. 
 
ಮೇರಿ ಕೊಮ್ ಚಿತ್ರದ ಅದ್ಭುತ ಯಶಸ್ಸಿನಿಂದ ಪ್ರೇರೇಪಿತರಾಗಿ ನಿರ್ದೇಶಕರು ಪಿಗ್ಗಿ ಜೊತೆ ಇನ್ನೊಂದು ಸಿನಿಮಾ ಮಾಡ ಬೇಕು ಎನ್ನುವ ಆಶಯದಿಂದ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಐತಿಹಾಸಿಕ ಅಂಶಗಳನ್ನು ಒಳಗೊಂಡ ಚಿತ್ರವಾಗಿದ್ದು, ಅದಕ್ಕಾಗಿ ಪ್ರೀ ಪ್ರೊಡಕ್ಷನ್ ಕೆಲಸ ಹೆಚ್ಚಾಗಿದೆ. ಆದ ಕಾರಣ ಇದನ್ನು ಮುಂದಿನ ವರ್ಷ ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಮಾಡುವ ಬಗ್ಗೆ ನಿರ್ಧರಿಸಿದ್ದಾರೆ ನಿರ್ದೇಶಕರು. ಪ್ರಿಯಾಂಕ ಇದರಲ್ಲಿ ಅತ್ಯಂತ ಬಲಶಾಲಿ ಸ್ತ್ರೀ ಪಾತ್ರಧಾರಿ ಆಗಿರುತ್ತಾಳೆ ಎಂದು ಹೇಳಿದ್ದಾರೆ ಒಮಾಂಗ್ ಆಪ್ತರು.

Share this Story:

Follow Webdunia kannada