Select Your Language

Notifications

webdunia
webdunia
webdunia
webdunia

ಮೊದಲ ದಿನವೇ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಪ್ರೇಮ್ ರತನ್ ಪಾಯೋ

ಮೊದಲ ದಿನವೇ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಪ್ರೇಮ್ ರತನ್ ಪಾಯೋ
, ಶುಕ್ರವಾರ, 13 ನವೆಂಬರ್ 2015 (10:22 IST)
ಸಲ್ಮಾನ್‌ಖಾನ್ 'ಭಜರಂಗಿ ಭಾಯ್‌ಜಾನ್' ಬಳಿಕ ನಟಿಸಿದ ಚಿತ್ರ ' ಪ್ರೇಮ್ ರತನ್ ಧನ್ ಪಾಯೋ'. ದೀಪಾವಳಿಗೆ ರಿಲೀಸ್ ಆದ ಈ ಸಿನಿಮಾ ಸಿನಿಮಾ ತಂಡದ ಬಳಿಕ ದಿವಾಳಿ ಧಮಾಕಾವನ್ನೇ ನೀಡಿದೆ. ಸೂರಜ್ ಭರ್ಜಾತಿಯಾ ನಿರ್ದೇಶನದಲ್ಲಿ 16 ವರ್ಷಗಳ ನಂತರ ಸಲ್ಲು ನಟಿಸಿದ ಈ ಸಿನಿಮಾ ಮೊದಲ ದಿನವೇ ಬಂಪರ್ ಹೊಡೆದಿದೆ
ಬಿಡುಗಡೆಯಾದ ಮೊದಲ ದಿನವೇ ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಬಾಕ್ಸಾಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ.ನಿನ್ನೆಯೊಂದೇ ದಿನ ಸಿನಿಮಾ 40 ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದೆ. ಸದ್ಯ ನಿನ್ನೆ ಒಂದೇ ದಿನ ಕಲೆಕ್ಷನ್ ನೋಡಿದ್ರೆ ಈ ವಾರದಾದ್ಯಂತಕ್ಕೆ ಸಿನಿಮಾ 110 ಕೋಟಿ ರೂಪಾಯಿಯಿಂದ 120 ಕೋಟಿ ರೂಪಾಯಿಗಳವರೆಗೆ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. 16 ವರ್ಷಗಳ ಬಳಿಕ ಒಂದಾದ ಸಲ್ಲು ಹಾಗೂ ಸೂರಜ್ ಜೋಡಿ ಮೊದಲ ದಿನವೇ ಬಾಲಿವುಡ್ ನಲ್ಲಿ ಇತಿಹಾಸ ನಿರ್ಮಿಸುವ ಸೂಚನೆಯನ್ನು ನೀಡಿದೆ.
 
ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಒಂದು ಪ್ರೇಮ ಕಥಾಧಾರಿತ ಸಿನಿಮಾ. ಸಿನಿಮಾದಲ್ಲಿ ಸಲ್ಲುಗೆ ನಾಯಕಿಯಾಗಿ ಸೋನಮ್ ಕಪೂರ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ  ಅನುಪಮ್ ಖೇರ್, ನೀಲ್ ನಿತಿನ್ ಮುಖೇಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Share this Story:

Follow Webdunia kannada