Select Your Language

Notifications

webdunia
webdunia
webdunia
webdunia

200 ಕೋಟಿ ಕ್ಲಬ್ ಸೇರಲಿರುವ ಪ್ರೇಮ್ ರತನ್ ಧನ್ ಪಾಯೋ

200 ಕೋಟಿ ಕ್ಲಬ್ ಸೇರಲಿರುವ ಪ್ರೇಮ್ ರತನ್ ಧನ್ ಪಾಯೋ
, ಬುಧವಾರ, 25 ನವೆಂಬರ್ 2015 (11:23 IST)
ಭಜರಂಗಿ ಭಾಯಿಜಾನ್ ಸಿನಿಮಾದ ಬಳಿಕ ಸಲ್ಮಾನ್ ಖಾನ್  ನಟಿಸಿರುವ ಸಿನಿಮಾ ಪ್ರೇಮ್ ರತನ್ ಧನ್ ಪಾಯೋ. ಈ  ಸಿನಿಮಾ ಕೂಡ ಇದೀಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಪ್ರೇಮ್ ರತನ್ ಧನ್ ಪಾಯೋ ಸಿನಿಮಾ 40 ಕೋಟಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಳಿಕ ಸಿನಿಮಾ ಬಿಡುಗಡೆಯಾದ ಮೂರನೇ ದಿನ ನೂರು ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ನಲ್ಲಿ ನಿರ್ಮಿಸುವ ಸೂಚನೆ ಕೊಟ್ಟಿತ್ತು. ಇದೀಗ ಆ ಸೂಚನೆ ನಿಜವಾಗಿದೆ. ಸಿನಿಮಾ ಇನ್ನೂರು ಕೋಟಿ ಕ್ಲಬ್ ಸೇರಲು ಹತ್ತಿರವಾಗುತ್ತಿದೆ.

ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಾಗಿದ್ದು ಎರಡು ವಾರದಲ್ಲಿ ಸಿನಿಮಾ 193.22 ಕೋಟಿ ಕಲೆಕ್ಷನ್ ಮಾಡಿ 200 ಕೋಟಿಯತ್ತ ಹೆಜ್ಜೆ ಹಾಕುತ್ತಿದೆ. ಸಿನಿಮಾ ದೇಶದಲ್ಲಿ 4,500 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದು, ಇನ್ನೂ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಸಿನಿಮಾ ಇನ್ನಷ್ಟು ಕಲೆಕ್ಷನ್ ಮಾಡೋದು ಖಚಿತವಾಗಿದೆ. 60 ಕೋಟಿ ಬಜೆಟ್ ನ ಈ ಸಿನಿಮಾ ಎರಡು ವಾರದಲ್ಲೇ ಇಷ್ಟೊಂದು ಕಲೆಕ್ಷನ್ ಮಾಡಿರೋದು ಸಿನಿಮಾ ತಂಡಕ್ಕೂ ಸಂತೋಷವನ್ನುಂಟು ಮಾಡಿದೆ.
ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ನಿರ್ದೇಶಕ ಸೂರಜ್ ಭರ್ಜಾತ್ಯಾಯ ಹಾಗೂ ಸಲ್ಮಾನ್ ಖಾನ್ 16 ವರ್ಷಗಳ ಬಳಿಕ ಜೊತೆಯಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಹಮ್ ಆಪ್ ಕೆ ಕೌನ್ ಹಾಗೂ ಹಮ್ ಸಾಥ್ ಸಾಥ್ ಹೈ ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಇದೀಗ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ಜೊತೆಯಾಗಿದ್ದಾರೆ.
 
ಈ ಸಿನಿಮಾದಲ್ಲಿ ಸಲ್ಲುಗೆ ನಾಯಕಿಯಾಗಿ ಸೋನಂ ಕಪೂರ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅನುಪಮ್ ಖೇರ್, ಸ್ವರ ಭಾಸ್ಕ್ರರ್ ಅರ್ಮಾನ್ ಕೊಹ್ಲಿ, ನೀಲ್ ನಿತನ್ ಮುಖೇಶ್ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada