Webdunia - Bharat's app for daily news and videos

Install App

ನನ್ನ ಗಂಡ ಪ್ರೋತ್ಸಾಹಿಸುತ್ತಿದ್ದಾರೆ: ಪ್ರೀತಿ ಜಿಂಟಾ

Webdunia
ಶುಕ್ರವಾರ, 3 ಫೆಬ್ರವರಿ 2017 (14:02 IST)
ಬಾಲಿವುಡ್ ಜತೆಗೆ ದಕ್ಷಿಣದ ಚಿತ್ರಗಳಲ್ಲೂ ಗುರುತಿಸಿಕೊಂಡ ಬೆಡಗಿ ಪ್ರೀತಿ ಜಿಂಟಾ. 2013ರಲ್ಲಿ ’ಇಷ್ಕ್ ಇನ್ ಪ್ಯಾರಿಸ್’ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಬೆಳ್ಳಿಪರದೆಯಿಂದ ದೂರ ಸರಿದರು. ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಜಿಂಟಾ, ’ಭಯ್ಯಾಜಿ ಸೂಪರ್ ಹಿಟ್’ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.
 
ಕಳೆದ ವರ್ಷ ಫೆಬ್ರವರಿಯಲ್ಲಿ ಅಮೆರಿಕಾ ಮೂಲದ ಜೀನ್ ಗುಡೆನಫ್‌ರನ್ನು ವರಿಸಿದ ಈ ಗುಳಿಕೆನ್ನೆ ಚೆಲುವೆ ಬಳಿಕ ಬಾಲಿವುಡ್‍ ಚಿತ್ರಗಳಿಂದ ದೂರ ಉಳಿದಿದ್ದರು. ಅಭಿನಯಕ್ಕೆ ಇನ್ನು ಗುಡ್ ಬೈ ಹೇಳಲಿದ್ದಾರಂತೆ. ಆದರೆ ನನ್ನ ಗಂಡ ಮತ್ತೆ ಅಭಿನಯಿಸುವಂತೆ ಪ್ರೋತ್ಸಾಹಿಸಿದ ಕಾರಣ ಬಾಲಿವುಡ್‌ಗೆ ಮರಳಿದ್ದೇನೆ ಎಂದಿದ್ದಾರೆ.
 
ಇತ್ತೀಚೆಗೆ ಲ್ಯಾಕ್ಮೆ ಫ್ಯಾಷನ್ ವೀಕ್‍ನಲ್ಲಿ ಹೆಜ್ಜೆ ಹಾಕಿದ ಪ್ರೀತಿ ಜಿಂಟಾ, ತನ್ನ ಮುಂದಿನ ಚಿತ್ರ, ಮದುವೆ ಬಳಿಕದ ಗೃಹಿಣಿ ಜೀವನದ ಬಗ್ಗೆ ಮಾಧ್ಯಮಗಳೊಂದಿಗೆ ಹಂಚಿಕೊಂಡರು. ಇನ್ನು ಮುಂದೆ ಸಿನಿಮಾಗಳಲ್ಲಿ ಅಭಿನಯಿಸುವುದು ಬೇಡ ಎಂದುಕೊಂಡೆ. ಬಿಜಿನೆಸ್ ಮಾಡಬೇಕೆಂದು ನಿರ್ಧರಿಸಿದೆ. ಆದರೆ ನಾನು ತುಂಬ ಅದೃಷ್ಟವಂತೆ, ತನ್ನ ಗಂಡ ಸಿನಿಮಾಗಳಲ್ಲಿ ಅಭಿನಯಿಸುವಂತೆ ಪ್ರೋತ್ಸಾಹಿಸಿದರು. ಹಾಗಾಗಿ ಮತ್ತೆ ಬಣ್ಣಹಚ್ಚುತ್ತಿದ್ದೇನೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ರಾಜ್ ನಿಡಿಮೋರು ಜತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ವಿದೇಶದಲ್ಲಿ ಒಟ್ಟಾಗಿ ಆತ್ಮೀಯವಾಗಿ ಕಾಣಿಸಿಕೊಂಡ ಸಮಂತಾ

ಮಾಶಾ ಘರ್ ಖ್ಯಾತಿಯ ಪಾಕ್‌ ನಟಿ ಹುಮೈರಾ ಅಸ್ಗರ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಶಿವಣ್ಣನ ಲುಕ್‌ಗೆ ಎಲ್ಲರೂ ಫಿದಾ

ಎಲ್ಲಾ ಒಪ್ಪಿಯೇ ನಡೆದಿದ್ದು, ರೇಪ್ ಕೇಸ್ ಹಿಂತೆಗೆದುಕೊಳ್ಳಿ: ಮಡೆನೂರು ಮನು ಮನವಿ

ಮುಂದಿನ ಸುದ್ದಿ
Show comments