Select Your Language

Notifications

webdunia
webdunia
webdunia
webdunia

ಸದ್ಯ ಮದುವೆ ಆಗಲ್ವಂತೆ ಪ್ರೀತಿ ಝಿಂಟಾ

ಸದ್ಯ ಮದುವೆ ಆಗಲ್ವಂತೆ ಪ್ರೀತಿ ಝಿಂಟಾ
, ಸೋಮವಾರ, 30 ನವೆಂಬರ್ 2015 (12:24 IST)
ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್‌ನ ಗುಳಿ ಕೆನ್ನೆಯ ಚೆಲುವೆ ಪ್ರೀತಿ ಝಿಂಟಾ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಅಂತಾ ಸುದ್ದಿಯಾಗಿತ್ತು.ಆದ್ರೀಗ ಪ್ರೀತಿ ಆ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಸದ್ಯಕ್ಕಂತೂ ನಾನು ಸಂಸಾರಿಯಾಗಲ್ಲ ಎಂದಿದ್ದಾರೆ.

ಪ್ರೀತಿ ಝಿಂಟಾ ತಮ್ಮ ಮದುವೆ ಬಗ್ಗೆ ಮಾಡಿರುವ ಟ್ವೀಟ್‌ನಲ್ಲಿ ನಾನು ಇದನ್ನು ಹೇಗೆ ಹೇಳಬೇಕೋ ಅಂತಾ ಭಯವಾಗುತ್ತಿದೆ.ಆದರೂ ಎಲ್ಲರಿಗೂ ಹೇಳುತ್ತಿದ್ದೇನೆ. ನಾನು ಈ ವರ್ಷ ವಿವಾಹವಾಗೋದಿಲ್ಲ.ಅಲ್ಲದೇ ವಿವಾಹವಾಗುವಾಗ ಎಲ್ಲರಿಗೂ ತಿಳಿಸಿಯೇ ವಿವಾಹವಾಗುತ್ತೇನೆ ಅಂತಾ ಹೇಳಿದ್ದಾರೆ. ಈಗಾಗಲೇ ಪ್ರೀತಿಗೆ 40 ವರ್ಷ ದಾಟಿದೆ.ಆದ್ರೆ ಇನ್ನೂ ಕೂಡ ಪ್ರೀತಿ ಈ ರೀತಿ ವಿವಾಹವನ್ನು ಮುಂದಕ್ಕೆ ಹಾಕುತ್ತಿದ್ದಾರೆ ಅಂತಾ ಅಭಿಮಾನಿಗಳು ಚಿಂತಿಸುತ್ತಿದ್ದಾರಂತೆ.
 
ಕಳೆದ ಕೆಲ ದಿನಗಳ ಹಿಂದೆ ಪ್ರೀತಿ ತನ್ನ ಬಾಯ್ ಫ್ರೆಂಡ್ ಅಮೇರಿಕಾ ಮೂಲದ ಜಿನೇ ಗುಡ್ ಇನ್ಫ್ ಅವರನ್ನು ಜನವರಿಯಲ್ಲಿ ವಿವಾಹವಾಗುತ್ತೇನೆ ಎಂದು ತಿಳಿಸಿದ್ದರು. ಆದ್ರೀಗ ಪ್ರೀತಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಸದ್ಯ ನಾನು ಮದುವೆಯಾಗಲ್ಲ ಅಂದಿದ್ದಾರೆ. ಈ ಹಿಂದೆ ಪ್ರೀತಿ ಹಾಗೂ ನೆಸ್ ವಾಡಿಯಾ ವಿವಾಹವಾಗುತ್ತಿದ್ದಾರೆ ಅಂತಾ ಸುದ್ದಿಯಾಗಿತ್ತು.ಬಳಿಕ ಅವರು ಪರಸ್ಪರ ದೂರವಾಗಿದ್ದರು.

Share this Story:

Follow Webdunia kannada